ರಾಜ್ಯ ಸಚಿವ ಸಂಪುಟದಲ್ಲಿ ವಿ.ಸೋಮಣ್ಣ ಸೇರ್ಪಡೆಗೆ ಪದವಿ ತ್ಯಾಗ ಮಾಡಿದ್ದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಗುರುವಾರ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರುಹಾಜರಾಗಿದ್ದು ಎದ್ದು ಕಾಣುತ್ತಿತ್ತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಅಚಲ ನಿಷ್ಠೆ, ವಿಶ್ವಾಸವಿಟ್ಟಿದ್ದ ಕೃಷ್ಣಯ್ಯ ಶೆಟ್ಟಿಯವರಿಗೆ ಸಚಿವಸ್ಥಾನ ತ್ಯಾಗ ಮಾಡಬೇಕಾಗಿ ಬಂದದ್ದು ನೋವು ತಂದಿದ್ದು, ಈ ಬೆಳವಣಿಗೆಯೇ ಕುಟುಂಬಕ್ಕೆ ಹಾಗೂ ಬೆಂಬಲಿಗರಲ್ಲಿ ಒಂದು ರೀತಿಯ ವಿಷಾದ ಆವರಿಸಿದೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ನಿನ್ನೆ ನಡೆದ ಪ್ರಹಸನ ಈ ವಿಷಯಗಳಿಗೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿಗಳ ಮಾತಿಗೆ ಕಟ್ಟುಬಿದ್ದು ಸಚಿವ ಪದವಿ ತ್ಯಾಗ ಮಾಡಿದ ಕೃಷ್ಣಯ್ಯ ಶೆಟ್ಟಿ ಇಂದಿನ ಸಮಾರಂಭದಿಂದ ದೂರ ಉಳಿದಿರುವುದು ಅವರ ಮನಸ್ಸಿನ ನೋವು ಇನ್ನೂ ಕಡಿಮೆಯಾಗಿಲ್ಲ ಎನ್ನುವುದನ್ನು ತೋರಿಸಿದೆ.
|