' ಯಡಿಯೂರಪ್ಪ ತಮ್ಮ ನಾಯಕರಲ್ಲ ಎಂದಿರುವ ಶಾಸಕ ವರ್ತೂರು ಪ್ರಕಾಶ್ ಹೇಳಿಕೆ ಸರಿಯಾಗಿಯೇ ಇದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಗುರುವಾರ ಬಳ್ಳಾರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದರು.ಅಲ್ಲದೇ ಸಿದ್ದರಾಮಯ್ಯ ಮೇಲಿರುವ ಅಭಿಮಾನ ವರ್ತೂರು ಅವರಿಗೆ ಕಂಟಕವಾಯಿತೇ ಎಂಬ ಪ್ರಶ್ನೆಗೆ, ವರ್ತೂರು ತಮ್ಮ ಒಳ್ಳೆಯ ಸ್ನೇಹಿತ, ತಮ್ಮ ಮೇಲಿನ ಅಭಿಮಾನದಿಂದಾಗಿ ಅವರು ಹಾಗೆ ಹೇಳಿದ್ದಾರೆ. ಅಲ್ಲದೇ, ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದರೇ ಹೊರತು ಯಡಿಯೂರಪ್ಪ ಅವರಿಗಲ್ಲ. ಸರ್ಕಾರ ರಚನೆ ಸಂದರ್ಭದಲ್ಲಿ ಶಾಸಕರ ಅಗತ್ಯವಿತ್ತು. ಆಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಬಲ ಪಡೆದುಕೊಂಡರು. ಈಗ ತೆಗೆದುಹಾಕಿದ್ದಾರೆ. ಅಷ್ಟಕ್ಕೂ ಯಡಿಯೂರಪ್ಪ ತಮ್ಮ ಲೀಡರ್ ಎಂದು ಪ್ರಕಾಶ್ ಎಲ್ಲಿಯೂ ಹೇಳಿರಲಿಲ್ಲ ಎಂದರು. |