ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದಾಗಿ ಹೇಳುವ ಬಿಜೆಪಿ ಸರ್ಕಾರ ಶತಮಾನದಷ್ಟು ಹಳೆಯದಾದ ದೇವಸ್ಥಾನ ಉರುಳಿಸಿದ ಗಣಿರೆಡ್ಡಿಗಳಿಗೆ ಶರಣಾಗಿ ಮೊಕದ್ದಮೆ ವಾಪಸ್ ಪಡೆದಿರುವುದು ಯಾವ ನೀತಿ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಪ್ರಶ್ನಿಸಿದ್ದಾರೆ.ಸಚಿವರಾದ ಗಣಿ ರೆಡ್ಡಿಗಳ ಸಹೋದರರನ್ನು ಓಲೈಸಲು ಸರ್ಕಾರ ಬಳ್ಳಾರಿಯ ರೆಡ್ಡಿಗಳ ಸಹೋದರರನ್ನು ಓಲೈಸಲು ಸರ್ಕಾರ ಬಳ್ಳಾರಿಯ ನುಗ್ಗಲಮ್ಮ ದೇವಸ್ಥಾನ ಪ್ರಕರಣ ಸಂಬಂಧ ಹೂಡಿದ್ದ ಮೊಕದ್ದಮೆ ವಾಪಸ್ ಪಡೆಯುವ ನಿರ್ಧಾರ ಮಾಡಿದೆ ಎಂದು ಟೀಕಿಸಿರುವ ಅವರು, ಕೇಸ್ ವಾಪಸ್ ಪಡೆಯುವ ಮೂಲಕ ಸರ್ಕಾರ ಘೋರ ಅಪರಾಧ ಎಸಗಿದೆ ಎಂದು ಕಿಡಿಕಾರಿದರು.ಸರ್ಕಾರದ ವಿರುದ್ಧ ಶಾಂತಿಯುತ ಹೋರಾಟ ನಡೆಸಿದ ರೈತರು, ಕಾರ್ಮಿಕರು ಹಾಗೂ ಯುವಕರ ವಿರುದ್ಧ ಮೊಕದ್ದಮೆ ಹೂಡಿರುವ ಸರ್ಕಾರ ಆ ಮೊಕದ್ದಮೆ ವಾಪಸ್ ಪಡೆಯದೇ ಉದಾಸೀನ ತೋರಿರುವುದು ಸರಿ ಅಲ್ಲ ಎಂದರು. |