ಶುಕ್ರವಾರ ರಾತ್ರಿ 12 ರಿಂದ ಮಧ್ಯರಾತ್ರಿ 2 ಗಂಟೆಯೊಳಗೆ ಜನ್ಮತಳೆಯಲಿರುವ ಮಕ್ಕಳಿಗೆ 500ರೂ. ನೀಡುವುದಾಗಿ ನಗರದ ವಿದ್ಯಾರ್ಥಿ ಕಾಂಗ್ರೆಸ್ ಘೋಷಿಸಿದೆ.ಯುವ ನಾಯಕ ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಇಂದು ರಾತ್ರಿ 12 ರಿಂದ 2ರೊಳಗೆ ಬೌರಿಂಗ್ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ 500ರೂ. ವಿತರಿಸುವುದಾಗಿ ನಗರ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ.ನಂತರ ಬೌರಿಂಗ್ ಆಸ್ಪತ್ರೆಯ ಬಡರೋಗಿಗಳಿಗೆ ಉಚಿತ ಹಣ್ಣು ಹಂಪಲು, ಬ್ರೆಡ್ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಸೀರೆ ವಿತರಿಸುವುದಾಗಿ ಹೇಳಿದರು.ಇದೇ ಸಂದರ್ಭದಲ್ಲಿ ಸೋಲಿಲ್ಲದ ಸರದಾರ ಎಂಬ ಬಿರುದಿಗೆ ಪಾತ್ರರಾಗಿರುವ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಅವರಿಗೆ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸುವ ಪ್ರಯುಕ್ತ ಈ ಉಚಿತ ಹಣ್ಣು-ಹಂಪಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. |