ನಗರದಲ್ಲಿ ಸರಗಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸರಗಳ್ಳರ ಬಗ್ಗೆ ಮಾಹಿತಿ ನೀಡಿದವರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಸರಗಳ್ಳರು ಸುಮಾರು 22-30 ವರ್ಷದೊಳಗಿನವರಾಗಿದ್ದು ಇವರೆಲ್ಲಾ ಒಂದೇ ತಂಡವನ್ನು ರಚಿಸಿಕೊಂಡು ಕಳ್ಳತನ ಎಸಗುತ್ತಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಇವರ ಹಾವಳಿ ಹೆಚ್ಚಾಗಿದೆ. ಕಪ್ಪು ಬಣ್ಣದ ಪಲ್ಸರ್ ಮೊಬೈಕ್‌ನಲ್ಲಿ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.
ಸರಗಳ್ಳರನ್ನು ಹಿಡಿಯಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು ಮಹಿಳಾ ಪೊಲೀಸರಿಗೆ ಕೃತಕ ಆಭರಣಗಳನ್ನು ತೊಡಿಸಿ ಹಗಲು-ರಾತ್ರಿ ವೇಳೆ ಆಯಾಕಟ್ಟಿನ ಸ್ಥಳಗಳಲ್ಲಿ ನಿಲ್ಲಿಸಲಾಗುವುದು ಎಂದು ಅವರು ತಿಳಿಸಿದರು. ಅಲ್ಲದೆ ಸರಗಳ್ಳರನ್ನು ಸೆರೆಹಿಡಿಯಲು ವಿಶೇಷ ಪೊಲೀಸ್ ಕಾರ್ಯ ಪಡೆಯನ್ನು ರಚಿಸಿ ರಾತ್ರಿ ಹಗಲು ಕಾರ್ಯಾಚರಣೆ ನಡೆಸಲಾಗುವುದು ಎಂದರು. |