ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮುಗಿಯದ ಭಿನ್ನಮತ: ರೆಡ್ಡಿ ಮನೆಯಲ್ಲಿ ರಹಸ್ಯ ಸಭೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಗಿಯದ ಭಿನ್ನಮತ: ರೆಡ್ಡಿ ಮನೆಯಲ್ಲಿ ರಹಸ್ಯ ಸಭೆ
ರಾಜ್ಯ ಬಿಜೆಪಿ ಪಾಳಯದಲ್ಲಿ ಇನ್ನೂ ಕೂಡ ಭಿನ್ನಮತ ಶಮನವಾದಂತೆ ಕಾಣುತ್ತಿಲ್ಲ. ಸಚಿವ ಜನಾರ್ದನ ರೆಡ್ಡಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಬಿತ್ತು ಎನ್ನುವಾಗಲೇ ನಗರದಲ್ಲಿ ರೆಡ್ಡಿ ಆಪ್ತ ವಲಯದ ಸಚಿವರು-ಶಾಸಕರ ಸಭೆ ನಡೆದಿದೆ.

ಜಿಲ್ಲೆಯ ಸಚಿವತ್ರಯರು ಸೇರಿದಂತೆ ಆನಂದ್ ಆಸ್ನೋಟಿಕರ್, ಬಾಲಚಂದ್ರ ಜಾರಕಿಹೋಳಿ ಸೇರಿದಂತೆ 8 ಸಚಿವರು ಹಾಗೂ 10 ಶಾಸಕರು ಗುಪ್ತ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಮಾತುಕತೆ ವಿವರಗಳು ಲಭ್ಯವಾಗಿಲ್ಲ.

ಸಚಿವರು ಮತ್ತು ಶಾಸಕರು ನಗರಕ್ಕೆ ಆಗಮಿಸಿ ನೇರವಾಗಿ ರೆಡ್ಡಿಯವರ ಕುಟೀರಕ್ಕೆ ತೆರಳಿದ್ದಾರೆ. ರಾತ್ರಿ ಸುದೀರ್ಘ ಕಾಲದ ವರೆಗೆ ನಡೆದ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ರೆಡ್ಡಿಯವರನ್ನು ಓಲೈಸಲು ಸುಗ್ಗಲಮ್ಮ ದೇವಸ್ಥಾನ ಧ್ವಂಸ ಪ್ರಕರಣ ಸೇರಿದಂತೆ ಅವರ ವಿರುದ್ಧ ಇದ್ದ 16 ಪ್ರಕರಣಗಳನ್ನು ಖುಲಾಸೆಗೊಳಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದರೂ, ಗುಪ್ತ ಸಭೆ ನಡೆಸಿದ್ದ ಔಚಿತ್ಯದ ಬಗ್ಗೆ ಸಂಶಯ ವ್ಯಕ್ತವಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶ್ರೀರಾಮುಲುಗೆ ಕಾನೂನು ಗೊತ್ತಿಲ್ಲ: ಸಿದ್ದು ಲೇವಡಿ
ಸರಗಳ್ಳರ ಮಾಹಿತಿ ನೀಡಿದ್ರೆ 10ಸಾವಿರ ರೂ.ಇನಾಮು!
ಬೆಂಗಳೂರು ವಿ.ವಿ.: ಮರು ಪರೀಕ್ಷೆಗೆ ನಿರ್ಧಾರ
'ಕೃಷ್ಣ' ಕಚೇರಿಗೆ ಅತಿಕ್ರಮವಾಗಿ ಪ್ರವೇಶಿಸಿಲ್ಲ: ಚಂದ್ರೇಗೌಡ
ಸರ್ಕಾರಿ ಆಸ್ಪತ್ರೆ ಮುಚ್ಚುವ ಪ್ರಶ್ನೆಯೇ ಇಲ್ಲ: ರಾಮಚಂದ್ರೇಗೌಡ
ರೈಲ್ವೆ ಯೋಜನೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿಲ್ಲ: ಮುನಿಯಪ್ಪ