ರಾಜ್ಯದಲ್ಲಿ ನಡೆದಿರುವ ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಜೆಡಿಎಸ್ ಆಗ್ರಹಿಸಿದ್ದು, ಪ್ರಶ್ನೆಪತ್ರಿಕೆ ಬಹಿರಂಗ ಸೇರಿದಂತೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಹಗರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಅದು ಒತ್ತಾಯಿಸಿದೆ.
ಕುಲಪತಿ ಆದಿಯಾಗಿ ಆಯಕಟ್ಟು ಹುದ್ದೆಗಳಿಗೆ ಕಳಂಕಿತರನ್ನು ನೇಮಿಸಿ ವಿಶ್ವವಿದ್ಯಾನಿಲಯವನ್ನು ಹಣ ಗಳಿಸುವ ದಂಧೆಯ ಅಡ್ಡೆಯಾಗಿ ಪರಿವರ್ತಿಸಲಾಗಿದೆ ಈ ಬಗ್ಗೆ ಸೂಕ್ತ ತನಿಖೆ ಯಾಗಬೇಕು ಎಂದು ಜೆಡಿಎಸ್ ಹಿರಿಯ ನಾಯಕ ಎಂ.ಸಿ. ನಾಣಯ್ಯ ಆಗ್ರಹಿಸಿದ್ದಾರೆ.
"ಹಗರಣಗಳ ನೈತಿಕ ಹೊಣೆ ಹೊತ್ತು ಕುಲಪತಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿರುವ ಅವರು, ಇದರಲ್ಲಿ ಭಾಗಿಯಾಗಿರುವ ಎಲ್ಲರನ್ನು ತನಿಖೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಅಥವಾ ಲೋಕಾಯುಕ್ತ ತನಿಖೆಗಾದರೂ ಒಪ್ಪಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
|