ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರದರ್ಶಿಸುವ ಎಲ್ಲ ಜಾಹೀರಾತು ಬೋರ್ಡ್‌ಗಳು ಇನ್ನು ಮುಂದೆ ಕನ್ನಡದಲ್ಲೇ ಇರಬೇಕು ಎಂದು ಎಲ್ಲ ಜಾಹೀರಾತು ಏಜನ್ಸಿ ಮುಖ್ಯಸ್ಥರಿಗೆ ಬಿಬಿಎಂಪಿ ಆಯುಕ್ತ ಭರತ್‌ಲಾಲ್ ಮೀನಾ ಅವರು ಸೂಚಿಸಿದ್ದಾರೆ.
ನಗರದಲ್ಲಿ ಜಾಹೀರಾತು ಏಜನ್ಸಿ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು ಜಾಹೀರಾತು ನೀಡುವ ಕಂಪೆನಿಗಳು ಕೂಡ ನಗರದಲ್ಲಿ ತಮ್ಮ ಉತ್ಪನ್ನಗಳ ಬಗ್ಗೆ ಜಾಹೀರಾತು ಬೋರ್ಡ್ ಹಾಕುವಾಗ ಕನ್ನಡದಲ್ಲೇ ಜಾಹೀರಾತು ವಿಷಯವನ್ನು ಮುದ್ರಿಸಬೇಕೆಂದು ಕಂಪೆನಿಗಳಿಗೆ ಪತ್ರ ಬರೆದು ಮನವಿ ಮಾಡಬೇಕೆಂದು ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಪಾಲಿಕೆ ವ್ಯಾಪ್ತಿಯಲ್ಲಿ ಕನ್ನಡ ಬಳುಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆಸಿ ಜಾಹೀರಾತು ಬೋರ್ಡ್‌ಗಳನ್ನು ಕನ್ನಡದಲ್ಲೇ ಪ್ರದರ್ಶಿಸಬೇಕು ಎಂಬ ಆಯುಕ್ತರ ಸೂಚನೆಗೆ ಜಾಹೀರಾತು ಏಜನ್ಸಿಗಳ ಮುಖ್ಯಸ್ಥರು ಒಪ್ಪಿಗೆ ನೀಡಿದ್ದಾರೆ.
|