ಹಿಂದೂ ದೇವರುಗಳ ಬಗ್ಗೆ ಅವಹೇಳಕಾರಿಯಾಗಿ ಮುದ್ರಿಸಿರುವ 'ಸತ್ಯದರ್ಶಿನಿ' ಪುಸ್ತಕದ ಹಸ್ತಪ್ರತಿಯನ್ನು ಹಾಜರುಪಡಿಸುವಂತೆ ಪುಸ್ತಕದ ಲೇಖಕ ಪರವಸ್ತು ಸೂರ್ಯನಾರಾಯಣ ರಾವ್‌ಗೆ ಚರ್ಚ್ ಮೇಲಿನ ದಾಳಿ ಕುರಿತಂತೆ ವಿಚಾರಣೆ ನಡೆಸುತ್ತಿರುವ ನ್ಯಾ.ಬಿ.ಕೆ.ಸೋಮಶೇಖರ್ ಆಯೋಗ ಸೂಚಿಸಿದೆ.
ಸತ್ಯದರ್ಶಿನಿ ಕೃತಿಯ ಹಸ್ತಪ್ರತಿಯನ್ನು 15ದಿನಗಳಲ್ಲಿ ಆಯೋಗದ ಮುಂದೆ ಹಾಜರುಪಡಿಸಬೇಕು. ಖಾಸಗಿಯಾಗಿ ವಿತರಿಸಲು ಮುದ್ರಿಸಲಾದ ಕೃತಿಗಳನ್ನು ಯಾರಿಗೆ ನೀಡಲಾಗಿದೆ ಎಂಬ ಪಟ್ಟಿಯನ್ನು ಇದರ ಜತೆ ನೀಡುವಂತೆ ಆಯೋಗ ನಿರ್ದೇಶನ ನೀಡಿದೆ.
ತಮ್ಮ ವಿರುದ್ಧ ಮತ್ತು ತಾವು ರಚಿಸಿದ ಕೃತಿಗಳ ಬಗ್ಗೆ ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಮಾಡಿರುವ ಆರೋಪಗಳಿಗೆ ಉತ್ತರಿಸಲು ತಾವು ಸಿದ್ದವಿರುವುದಾಗಿ ಮತ್ತೊಂದು ಪ್ರಮಾಣಪತ್ರ ಸಲ್ಲಿಸಿರುವ ಪರವಸ್ತು ಸೂರ್ಯನಾರಾಯಣರಾವ್, ಇದಕ್ಕೆ ಕಾಲಾವಕಾಶ ನೀಡಬೇಕು ಎಂದು ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. |