ಬೌರಿಂಗ್ ಸಂಸ್ಥೆಯ ಸಮೀಪ ಇರುವ ಜಾಗವನ್ನು ಬಿಟ್ಟುಕೊಡಬೇಕೆಂದು ಮುಖ್ಯಮಂತ್ರಿ ಕಚೇರಿಯಿಂದ ಹೋಗಿರುವ ಫ್ಯಾಕ್ಸ್ ಸಂದೇಶವೊಂದು ನಿಗೂಢತೆ ಹುಟ್ಟು ಹಾಕಿರುವ ಅಂಶವೊಂದು ಬೆಳಕಿಗೆ ಬಂದಿದೆ.
ಪೊಲೀಸ್ ವಿಚಾರಣೆಗೆ ಆದೇಶ ಮಾಡಿ ಒಂದು ತಿಂಗಳು ಕಳೆದರೂ ಈ ಪತ್ರವನ್ನು ಯಾರು ಬರೆದಿದ್ದಾರೆ, ಯಾವ ಉದ್ದೇಶಕ್ಕೆ ಬರೆದಿದ್ದಾರೆ ಎಂಬುದು ಬಹಿರಂಗವಾಗಿಲ್ಲ.
ಮುಖ್ಯಮಂತ್ರಿಗಳ ಕಚೇರಿಯ ವಿಶೇಷಾಧಿಕಾರಿ ಲೋಕೇಶ್ ಎಂಬುವರು ತಮ್ಮ ಕ್ಲಬ್ಬಿನ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ ಎಂದು ಸೆಂಚುರಿ ಕ್ಲಬ್ ಆಡಳಿತ ಮಂಡಳಿ ಆರೋಪಿಸಿತ್ತು.
ಈ ಬಗ್ಗೆ ದೂರು ನೀಡಲಾಗಿದ್ದು, ಘಟನೆಯ ಕುರಿತು ಪೊಲೀಸರು ತುಟಿ ಪಿಟಿಕ್ ಅನ್ನುತ್ತಿಲ್ಲ. ಈ ಘಟನೆ ನಂತರ ಮುಖ್ಯಮಂತ್ರಿ ಕಚೇರಿಯವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿ, ನಾವು ನಮ್ಮ ಕಚೇರಿಯಿಂದ ಇಂಥ ಪತ್ರ ಬರೆದಿಲ್ಲ. ಅದನ್ನು ಯಾರೋ ಫೋರ್ಜರಿ ಮಾಡಿರಬಹುದೆಂದು ಪೊಲೀಸರಿಗೆ ತಿಳಿಸಿದ್ದಾರೆ. |