ಕಗ್ಗೆರೆ ಪ್ರಕಾಶ್ ನಿರೂಪಿಸಿರುವ ಚಿತ್ರನಟಿ ಶ್ರುತಿ ಅವರ ಖಾಸಗಿ ಬದುಕಿನ ಒಳ-ಹೊರಗನ್ನು ಅನಾವರಣ ಮಾಡುವ 'ಶ್ರುತಿ ಪ್ರೇಮಾಯಣ' ಕೃತಿಯನ್ನು ಶನಿವಾರ ಬಿಡುಗಡೆ ಮಾಡಲಾಯಿತು.ಪ್ರಸ್ ಕ್ಲಬ್‌ನಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ರವೀಂದ್ರ ರೇಶ್ಮೆ, ಶ್ರುತಿ ಅವರ ಜೀವನದ ಏರಿಳಿತಗಳು ಹಾಗೂ ಅವರ ಖಾಸಗಿ ಬದುಕಿನ ಘಟನೆಗಳು ವಿಕ್ರಾಂತ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗಿತ್ತು. ಅದನ್ನು ಈಗ ಪುಸ್ತಕ ರೂಪದಲ್ಲಿ ಹೊರತರಲಾಗಿದೆ ಎಂದರು. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಮುಖ್ಯಮಂತ್ರಿ ಯಡಿಯೂರಪ್ಪ ಶ್ರುತಿ ಅವರನ್ನು ನಿಗಮದಿಂದ ತೆಗೆದು ಹಾಕಿರುವುದು ಖಂಡನೀಯ ಎಂದ ಅವರು, ಈ ಬಗ್ಗೆ ಯಡಿಯೂರಪ್ಪನವರು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.ರಾಜಕಾರಣಿಗಳ ಖಾಸಗಿ ಬದುಕನ್ನು ಕೆದಕಲು ಹೋದರೆ ಯಾರೂ ರಾಜಕಾರಣದಲ್ಲಿ ಇರಲು ಯೋಗ್ಯರಲ್ಲ, ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಶ್ರುತಿ ವಿಚಾರದ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕಾಗಿದೆ ಎಂಬುದಾಗಿ ಹೇಳಿದರು. |