ಕೈಗಾ ಅಣು ಸ್ಥಾವರದ ತರಬೇತಿ ಅಧಿಕಾರಿ ಮಹಾಲಿಂಗಂ ಶವ ಪರೀಕ್ಷೆ ವರದಿ ಬಂದ ಮೇಲೂ ಅವರ ಸಾವಿನ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಮಹಾಲಿಂಗಂ ಶವ ಪೂರ್ಣಪ್ರಮಾಣದಲ್ಲಿ ಕೊಳೆತು ಹೋದ ಕಾರಣ ಖಚಿತವಾಗಿ ವರದಿ ನೀಡುವುದು ಅಸಾಧ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಾಲಿಂಗಂ ಸಾವಿನ ರಹಸ್ಯ ಬಯಲಾಗಲಿದೆ ಎಂದು ಎಲ್ಲರೂ ಕುತೂಹಲದಿಂದ ಕಾದಿದ್ದರು. ಆದರೆ ಶವಪರೀಕ್ಷೆ ವರದಿಯಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳದೇ ಇದ್ದುದ್ದರಿಂದ ಗೊಂದಲ ಮತ್ತೆ ಮುಂದುವರಿದಿದೆ. ಮಹಾಲಿಂಗಂ ಅವರ ಶ್ವಾಸಕೋಶ, ಹೃದಯ, ಮೆದುಳುಗಳ ಮೇಲೆ ಹುಳುಗಳು ದಾಳಿ ನಡೆಸಿದ್ದರಿಂದ ಪರೀಕ್ಷಾ ವರದಿ ಸಿದ್ದಪಡಿಸಲು ಸಾಧ್ಯವಾಗಿಲ್ಲ ಮತ್ತು ಸಾವಿನ ರಹಸ್ಯ ತಿಳಿಯಲು ಸದ್ಯಕ್ಕೆ ಸಾಧ್ಯವಾಗದಂತಾಗಿದೆ ಎಂದು ವೈದ್ಯರು ತಿಳಿದ್ದಾರೆ.
ಈಗ ಪೊಲೀಸರು ಮತ್ತೆ ಸಾವಿನ ರಹಸ್ಯ ತಿಳಿಯುವ ಸಾಧ್ಯತೆ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಹುಬ್ಬಳ್ಳಿ ಅಥವಾ ಬೆಂಗಳೂರಿನ ಫಾರೆನ್ಸಿಕ್ ತಜ್ಞರೊಂದಿಗೆ ಸಂಪರ್ಕ ಸಾಧಿಸಿ ಅವರಿಂದ ಮಹಾಲಿಂಗಂ ಸಾವಿನ ರಹಸ್ಯ ಅರಿಯುವ ಯೋಚನೆಯಲ್ಲಿ ಪೊಲೀಸರಿದ್ದಾರೆ. |