' ಸಂಘ ಪರಿವಾರಕ್ಕೆ ಮಾಹಿತಿಯನ್ನು ನೀಡುವ ಸಲುವಾಗಿ ವಿಧಾನಸೌಧದ ಬದಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೆಸಾರ್ಟ್‌ನಲ್ಲಿ ಚಿಂತನ-ಮಂಥನ-2 ಸಭೆಯನ್ನು ನಡೆಸಿರುವುದಾಗಿ' ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರವಾಗಿ ಆರೋಪಿಸಿದ್ದಾರೆ.ಆರ್‌ಎಸ್‌ಎಸ್, ಬಜರಂಗದಳ ಸೇರಿದಂತೆ ಸಂಘಪರಿವಾರಕ್ಕೆ ಸರ್ಕಾರದ ಮಾಹಿತಿಯನ್ನು ನೀಡುವ ಸಲುವಾಗಿಯೇ ರೆಸಾರ್ಟ್ ಸಭೆ ನಡೆಸಿರುವುದಾಗಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ದೂರಿದರು. ಸಚಿವರ ಅಧಿಕಾರಿಗಳ ಸಭೆಯು ಅಭಿವೃದ್ಧಿಗಿಂತ ಮೋಜಿನ ಕೂಟವಾಗಿತ್ತು ಎಂದು ಹರಿಹಾಯ್ದರು.ಪಕ್ಷ ಹಾಗೂ ಸರ್ಕಾರದಲ್ಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ರೆಸಾರ್ಟ್‌ನಲ್ಲಿ ಸಭೆ ನಡೆಸಿ ಜನರ ಹಣ ಪೋಲು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ ಎಂದು ಹೇಳಿದರು. |