ಆರ್ಥಿಕ ಸಂಕಷ್ಟದಿಂದ ಬೇಸತ್ತು ಅತಿ ಗಣ್ಯ ವ್ಯಕ್ತಿಗಳ ಭದ್ರತಾ ವಿಭಾಗದ ಹೆಡ್‌ಕಾನ್‌ಸ್ಟೇಬಲ್ ಒಬ್ಬರು ಸರ್ವಿಸ್ ರಿವಾಲ್ವರ್‌ನಿಂದ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಗಡಿ ಸಮೀಪದ ಪೊಲೀಸ್ ವಸತಿ ಸಮುಚ್ಚಯಲ್ಲಿ ನಡೆದಿದೆ.
ಹೆಡ್‌ಕಾನ್‌ಸ್ಟೇಬಲ್ ಎಸ್.ಆನಂದನ್(47) ಆತ್ಮಹತ್ಯೆ ಮಾಡಿಕೊಂಡವರು. ಅವರು ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ಅಂಗರಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ಶನಿವಾರ ಸಾಯಂಕಾಲ ಆನಂದನ್ ಪತ್ನಿ ಸೀತಾಲಕ್ಷ್ಮಿ ಹಾಗೂ ಮಗ ವಿಘ್ನೇಶ್ ಜತೆಗೆ ವಿಜಯನಗರದಲ್ಲಿರುವ ಅತ್ತೆಯ ಮನೆಗೆ ಹೋಗಿದ್ದರು. ರಾತ್ರಿ ಅತ್ತೆಯ ಮನೆಯಲ್ಲೇ ಉಳಿದುಕೊಂಡು ಆನಂದನ್ ಭಾನುವಾರ ಅಲ್ಲಿಂದಲೇ ಕೆಲಸಕ್ಕೆ ಹೋಗಿದ್ದರು.
ಅವರ ಪತ್ನಿ ಹಾಗೂ ಮಗ ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದರು. ಕೆಲಸ ಮುಗಿಸಿಕೊಂಡು ಮಾಗಡಿ ರಸ್ತೆಯ ಪೊಲೀಸ್ ವಸತಿ ಸಮುಚ್ಚಯದಲ್ಲಿರುವ ಮನೆಗೆ ಸಾಯಂಕಾಲ ಹಿಂತಿರುಗಿದ ಆನಂದನ್ ರಿವಾಲ್ವರ್‌ನಿಂದ ತಲೆ ಬಲ ಭಾಗಕ್ಕೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. |