ನಕಲಿ ಜಾತಿ ಪ್ರಮಾಣ ಪತ್ರ, ಚುನಾವಣಾ ಅಕ್ರಮ ಸೇರಿದಂತೆ ಅನೇಕ ರೀತಿಯ ಅವ್ಯವಹಾರ ಎಸಗಿರುವ ಶಾಂತ ಅವರ ಆಯ್ಕೆ ಅನೂರ್ಜಿತಗೊಳಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತ ಎಂ.ಚಂದ್ರೇಗೌಡ ಹೈಕೋರ್ಟ್ ಮೊರೆ ಹೋಗಿದ್ದಾರೆ.ಬಳ್ಳಾರಿ ಲೋಕಸಭಾ ಕ್ಷೇತ್ರವು ಈ ಬಾರಿ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿತ್ತು. ಆದರೆ ಹಿಂದುಳಿದ ವರ್ಗವಾಗಿರುವ ಭೋಯಾ ಜಾತಿಗೆ ಸೇರಿರುವ ಶಾಂತಾ ಅವರು, ಪರಿಶಿಷ್ಟ ವರ್ಗಕ್ಕೆ ಸೇರಿರುವುದಾಗಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿ ಭೋಯಾ ಜನಾಂಗವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.ಇಷ್ಟೇ ಅಲ್ಲದೇ, ಚುನಾವಣೆ ದಿನ ನಕಲಿ ಮತದಾನ ಮಾಡಿಸುವಲ್ಲಿ ಶಾಂತಾ ಯಶಸ್ವಿಯಾಗಿದ್ದಾರೆ. ಮತದಾನಕ್ಕೆ ಮುಂಚಿತವಾಗಿ ಸಾಕಷ್ಟು ಪ್ರಮಾಣದಲ್ಲಿ ಹಣ, ಹೆಂಡ ಹಂಚಲಾಗಿದೆ. ಹೀಗೆ ನಾನಾ ರೀತಿಯಲ್ಲಿ ಅವರು ಅಕ್ರಮ ಎಸಗಿದ್ದಾರೆ ಎಂದು ಚಂದ್ರೇಗೌಡ ಚುನಾವಣಾ ತಕರಾರು ಅರ್ಜಿಯಲ್ಲಿ ದೂರಿದ್ದಾರೆ. ಅರ್ಜಿಯ ವಿಚಾರಣೆ ಈ ವಾರದಲ್ಲಿ ನಡೆಯುವ ಸಾಧ್ಯತೆ ಇದೆ. |