ರಾಜ್ಯದಲ್ಲಿ ವಿದ್ಯುತ್ ದರ ಏರಿಸಲು ಸರ್ಕಾರ ನಿರ್ಧರಿಸಿದ್ದು, ಬರುವ ಜನವರಿಯಿಂದ ಪ್ರತಿ ಯೂನಿಟ್ ವಿದ್ಯುತ್‌ಗೆ 51 ಪೈಸೆ ಹೆಚ್ಚಳವಾಗಲಿದೆ.
ವಿದ್ಯುತ್ ದರ ಏರಿಕೆ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯ ನಂತರ ಇಂಧನ ಸಚಿವ ಈಶ್ವರಪ್ಪನವರ ಸಮ್ಮುಖದಲ್ಲಿ ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಜಯರಾಜ್ ವಿದ್ಯುತ್ ದರ ಏರಿಕೆಯ ನಿರ್ಧಾರವನ್ನು ಪ್ರಕಟಿಸಿದರು.
ರಾಜ್ಯದಲ್ಲಿ ಪ್ರತಿ ಯೂನಿಟ್‌ಗೆ 51ಪೈಸೆ ದರ ಏರಿಕೆಗೆ ಅನುಮತಿ ನೀಡುವಂತೆ ರಾಜ್ಯದ 5ವಿದ್ಯುತ್ ಸರಬರಾಜು ಕಂಪೆನಿಗಳು ಮತ್ತು ಕೆಪಿಟಿಸಿಎಲ್ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರದ ಮುಂದೆ ದರ ಏರಿಕೆಯ ಪ್ರಸ್ತಾವನೆ ಸಲ್ಲಿಸಿ ಅನುಮತಿ ಕೋರಿದೆ ಎಂದು ತಿಳಿಸಿದರು.
ಪ್ರತಿ ಯೂನಿಟ್‌ಗೆ 51ಪೈಸೆ ದರ ಏರಿಕೆಯಿಂದ ಈಗಿರುವ ದರಕ್ಕಿಂತ ಶೇ.20ರಷ್ಟು ದರ ಏರಿಕೆಯಾಗಲಿದೆ ಎಂದರು. ಕಳೆದ 2003ರಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಿಲ್ಲ ಎಂದು ಹೇಳಿದರು.
ವಿದ್ಯುತ್ ಕಂಪೆನಿಗಳು ಕೆಇಆರ್‌ಪಿ ಮುಂದೆ ಸಲ್ಲಿಸಿರುವ ವಿದ್ಯುತ್ ದರ ಏರಿಕೆಯ ಬಗ್ಗೆ ಕೆಇಆರ್‌ಪಿ ಸಾರ್ವಜನಿಕರ ಆಕ್ಷೇಪಣೆಗಳನ್ನು ಆಲಿಸಿದ ನಂತರ ದರ ಏರಿಕೆಯ ಬಗ್ಗೆ ತನ್ನ ತೀರ್ಮಾನ ಪ್ರಕಟಿಸಲಿದ್ದು, ಇದಕ್ಕೆ 3ತಿಂಗಳ ಕಾಲಾವಕಾಶ ಆಗಲಿದ್ದು ದರ ಏರಿಕೆ ಬರುವ ಜನವರಿಯಿಂದ ಜಾರಿಯಾಗಲಿದೆ ಎಂದರು. |