ಅಬಕಾರಿ ನಿಯಮ ಮೀರಿ ರಾತ್ರಿ 11.30ರವರೆಗೆ ಚಟುವಟಿಕೆ ನಡೆಸುವ ಬಾರ್ ಅಂಡ್ ರೆಸ್ಟೋರೆಂಟ್, ಡಿಸ್ಕೋಥೆಕ್‌ಗಳು ಮಧ್ಯರಾತ್ರಿ 12 ಮೀರಿ ವಹಿವಾಟು ನಡೆಸುವ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರು ಎಚ್ಚರಿಕೆ ನೀಡಿದ್ದಾರೆ.
ಅಬಕಾರಿ ನಿಯಮದಂತೆ ರಾತ್ರಿ 11.30ರವರೆಗೆ ಬಾರ್ ಅಂಡ್ ರೆಸ್ಟೋರೆಂಟ್‌ಗಳು ಮಧ್ಯರಾತ್ರಿ 12ರವರೆಗೆ ಹೋಟೆಲ್‌ಗಳ ವಹಿವಾಟು ನಡೆಸಬೇಕಾಗಿದ್ದು ಅದನ್ನು ಮೀರುವವರ ವಿರುದ್ಧ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ರಾತ್ರಿ ವೇಳೆ ತಪಾಸಣೆ ನಡೆಸಲಿದ್ದು ರಾತ್ರಿ 11.30ರ ನಂತರವೂ ಚಟುವಟಿಕೆ ನಡೆಸುವ ಬಾರ್ ಅಂಡ್ ರೆಸ್ಟೋರೆಂಟ್, ಡಿಸ್ಕೋಥೆಕ್‌ಗಳು ಹಾಗೂ 12ರ ನಂತರವೂ ವಹಿವಾಟು ಮಾಡುವ ಹೋಟೆಲ್‌ಗಳ ವಿರುದ್ಧ ಅಬಕಾರಿ ನಿಯಮ ಸೆಕ್ಷನ್ 103ರನ್ವಯ ಪ್ರಕರಣ ದಾಖಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಎಚ್ಚರಿಕೆಯನ್ನು ಮೀರಿ ಚಟುವಟಿಕೆಯಲ್ಲಿ ತೊಡಗುವ ಬಾರ್, ಡಿಸ್ಕೋಥೆಕ್ ಹಾಗೂ ಹೋಟೆಲ್‌ಗಳ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ. |