ನಗರದ ಹಾಗೂ ಅನಿವಾಸಿ ಭಾರತೀಯ ಕೆಲವು ವ್ಯಕ್ತಿಗಳಿಗೆ ಮನೆ ನಿವೇಶನ ಕೊಡುವುದಾಗಿ ವಂಚಿಸಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ದಾಖಲಾಗಿರುವ ಕೇರಳದ ಜೋಸೆಫ್ ಚಾಕೋ ಪ್ರಕರಣವನ್ನು ಸಿಓಡಿಗೆ ವಹಿಸಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಶಂಕರ ಬಿದರಿ ಗುರುವಾರ ತಿಳಿಸಿದ್ದಾರೆ.
ಆರೋಪಿ ಚಾಕೋ ವಿರುದ್ಧ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 40ಕೇಸುಗಳು ದಾಖಲಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣದ ತನಿಖಾ ವಿಚಾರದಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಪೊಲೀಸರ ನಡುವೆ ವಿವಾದ ತಲೆದೋರುವುದು ಬೇಡ ಎನ್ನುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಓಡಿಗೆ ವಹಿಸಲಾಗಿದೆ ಎಂದರು.
ಈ ಪ್ರಕರಣ ಭೇದಿಸಲು ನಗರ ಪೊಲೀಸರು ಸಮರ್ಥವಾಗಿದ್ದಾರೆಂದು ಸ್ಪಷ್ಟಪಡಿಸಿದ ಅವರು, ಅನಗತ್ಯ ವಿಳಂಬ ಮತ್ತು ತೊಂದರೆಯಾಗಿ ಹಣ ಕಳೆದುಕೊಂಡವರಿಗೆ ಇನ್ನೂ ತೊಂದರೆಯಾಗಬಾರದು ಎಂಬ ನೆಲೆಯಲ್ಲಿ ಪ್ರಕರಣವನ್ನು ಸಿಓಡಿಗೆ ವಹಿಸಲಾಗಿದೆ ಎಂದು ಹೇಳಿದರು. |