ಕೋಲಾರ ಜಿಲ್ಲೆ ಕೆಜಿಎಫ್ ಚಿನ್ನದ ಗಣಿಗೆ ಇದೀಗ ಮರುಜೀವ ಬಂದಂತಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಜಾಗತಿಕ ಟೆಂಡರ್ ಕರೆಯಲು ಹೈಕೋರ್ಟ್ ಅನುಮತಿ ನೀಡಿದೆ.
ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಸಂಗ್ರಹಿಸಿಲಾಗಿರುವ ಭಾರಿ ಪ್ರಮಾಣದ ಅದಿರನ್ನು ಸಂಸ್ಕರಿಸಲು ವಿದೇಶಿ ಕಂಪೆನಿಗಳಿಗೆ ಅವಕಾಶ ಮಾಡಿಕೊಡುವ ಜಾಗತಿಕ ಟೆಂಡರ್‌ಗೆ ಅನುಮತಿ ನೀಡಿ ಎಂದು ನ್ಯಾಯಲಯ ಆದೇಶ ನೀಡಿದೆ.
ಜಾಗತಿಕ ಟೆಂಡರ್ ಕರೆಯಲು ಅನುಮತಿ ಕೋರಿ ಭಾರತ್ ಗೋಲ್ಡ್ ಮೈನ್ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಈ ಹಿಂದೆ ಬಾರತ್ ಗೋಲ್ಡ್ ಮೈನ್‌ನಲ್ಲಿ ಕೆಲಸ ಮಾಡಿದ್ದ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂಬ ಷರತ್ತು ವಿಧಿಸಿ ಜಾಗತಿಕ ಟೆಂಡರ್ ಕರೆಯುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಹೈಕೋರ್ಟ್‌ನ ಈ ಆದೇಶದಿಂದ ಕೆಜಿಎಫ್ ಚಿನ್ನದ ಗಣಿಗೆ ಮರುಜೀವ ಬಂದಿದ್ದು, ಗಣಿ ಪ್ರದೇಶದಲ್ಲಿ ಗುಡ್ಡೆ ಹಾಕಿರುವ ಮಣ್ಣಿನಿಂದ 24 ಟನ್ ಚಿನ್ನವನ್ನು ಸಂಸ್ಕರಿಸಬಹುದೆಂದು ಅರ್ಜಿದಾರರು ತಿಳಿಸಿದ್ದರು. |