ಕೆಪಿಸಿಸಿ ಸದಸ್ಯತ್ವದ ನೆಪದಲ್ಲಿ ನಕಲಿ ನೋಟುಗಳನ್ನು ಹಂಚುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಠೋಡ್ ವಿರುದ್ಧ ಎಸಿಎಂಎಂ ನ್ಯಾಯಾಲಯದಲ್ಲಿ ಹೂಡಿದ್ದ ವಂಚನೆ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ.ಈ ಪ್ರಕರಣಕ್ಕೆ ಸಂಬಂದಿಸಿದಂತೆ ಬೆಂಗಳೂರು ನಗರ 8ನೇ ಎಸಿಎಂಎಂ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ಪ್ರಶ್ನಿಸಿ ಪ್ರಕಾಶ್ ರಾಠೋಡ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ್ದ ನ್ಯಾಯಮೂರ್ತಿ ವಿ.ಜಿ. ಸಭಾಹಿತ್ರಿದ್ದ್ ಏಕ ಸದಸ್ಯ ಪೀಠ, ಎಸಿಎಂಎಂ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ಅನ್ನು ರದ್ದುಗೊಳಿಸಿದೆ.ಜನಾರ್ದನ ಪೂಜಾರಿ ಮತ್ತು ರಾಠೋಡ್ ಅವರುಗಳು ಜನರನ್ನು ವಂಚಿಸುವ ಉದ್ದೇಶದಿಂದ ಈ ಕಾರ್ಯ ನಡೆಸಿಲ್ಲ. ಇದು ಸದಸ್ಯತ್ವ ಪಡೆದವರಿಗೆ ನೀಡುವ ರಸೀದಿಯಾಗಿದ್ದು, ಇದರಿಂದ ಯಾವುದೇ ಹಣ ಮಾಡುವ ಉದ್ದೇಶ ಇರಲಿಲ್ಲ. ಸದಸ್ಯತ್ವ ರಸೀದಿಯನ್ನು ಐದು ರೂ. ನೋಟಿನ ಮಾದರಿಯಲ್ಲಿ ಮುದ್ರಿಸಿರುವುದು ತಪ್ಪಾದರೂ ಅದು ವಂಚನೆಯ ಉದ್ದೇಶದಿಂದಲ್ಲ ಎಂದು ಪ್ರಕರಣವನ್ನು ವಜಾಗೊಳಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. |