ಒಂದು ವರ್ಷ ಪೂರೈಸಿರುವ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಏಳೆಂಟು ಸಚಿವರು ಆಲಸಿಗಳಾಗಿದ್ದಾರೆ ಎಂಬುದಾಗಿ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.ನಗರದಲ್ಲಿ ನಡೆದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏಳೆಂಟು ಇಲಾಖೆಗಳ ಸಚಿವರ ಕೆಲಸ ಕಾರ್ಯಗಳು ತಮಗೆ ಅತೃಪ್ತಿ ತಂದಿದೆ. ಆ ಇಲಾಖೆಗಳ ಸಚಿವರು ಆಲಸಿಗಳಾಗಿದ್ದಾರೆ. ಅವರ ವರ್ತನೆ ಸರಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಆದರೆ ಸಚಿವರ ಕಾರ್ಯ ನಿರ್ವಹಣೆ ಸರಿಯಿಲ್ಲ ಎಂದರ್ಥವಲ್ಲ. ಜವಾಬ್ದಾರಿ