ತಮ್ಮ ಮನೆಯಲ್ಲಿ ಶನಿವಾರ ನಸುಕು ಹರಿಯುವ ಮುನ್ನವೇ ಕೆಳಗೆ ಬಿದ್ದು ಕೈಗೆ ಗಾಯ ಮಾಡಿಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಎಡಕೈಗೆ ಅಪರಾಹ್ನ ಶಸ್ತ್ರಚಿಕಿತ್ಸೆ ಮಾಡಲಾಯಿತು. ತಡರಾತ್ರಿ ಬಚ್ಚಲಮನೆಗೆ ಹೋಗುತ್ತಿದ್ದ ಅವರು ಆಯತಪ್ಪಿ ಕೆಳಗೆ ಬಿದ್ದ ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಎಡಕೈಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.
"ನಾನು ಅಪರಾತ್ರಿ 1.30ರ ಸುಮಾರಿಗೆ ಎಚ್ಚರಗೊಂಡೆ. ಬಾತ್‌ರೂಮಿನ ಬಾಗಿಲು ತಳ್ಳಿದಾಗ, ಆಯ ತಪ್ಪಿ ಕೆಳಗೆ ಬಿದ್ದೆ" ಎಂದು ದೇವೇಗೌಡರು ಹೇಳಿದ್ದಾರೆ.
ಸಣ್ಣ ಶಸ್ತ್ರಕ್ರಿಯೆಯಾದುದರಿಂದ ಒಂದೆರಡು ಗಂಟೆಗಳ ವಿಶ್ರಾಂತಿ ಬಳಿಕ 76ರ ಹರೆಯದ ದೇವೇಗೌಡರು, ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದರು |