ಬೆಂಗಳೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ವಕೀಲರ ಸಂಘದ ಅಧ್ಯಕ್ಷರಾಗಿ ಪುಟ್ಟೇಗೌಡ ಆಯ್ಕೆಯಾಗಿದ್ದಾರೆ. ಅವರು ಕೆ.ಎನ್ ಸುಬ್ಬಾರೆಡ್ಡಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಭಾನುವಾರ ನಡೆದ ಹೈಟೆಕ್ ಚುನಾವಣೆಯಲ್ಲಿ ಪುಟ್ಟೇಗೌಡರ ಆಯ್ಕೆಯಾಗಿದೆ.
ಪದಾಧಿಕಾರಿಗಳ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆಯಿತು. 2009-11ನೆ ಸಾಲಿಗೆ ನಡೆದ ಚುನಾವಣೆಯು ಹೈಟೆಕ್ ಆಗಿತ್ತು. ವಕೀಲರ ಸಂಘದ ಇತಿಹಾದಲ್ಲೇ ಇದು ಹೈಟೆಕ್ ಚುನಾವಣೆಯಾಗಿದೆ.
ವಕೀಲರ ಸಂಘಕ್ಕೆ ಮಾರ್ಚ್ 22ರಂದು ನಡೆದ ಚುನಾವಣೆಯಲ್ಲಿ ಭಾರೀ ರಾದ್ಧಾಂತವೇ ಆಗಿತ್ತು. ನಕಲಿ ಮತದಾನ, ಹೊರಗಿನವರ ಸೇರ್ಪಡೆ, ತೂರಾಡಿದ ಮತಪತ್ರ, ಮುಕ್ತಮತದಾನಕ್ಕೆ ಅಡ್ಡಿ ಮುಂತಾದ ಮಾರಾಮಾರಿಗಳು ನಡೆದು ಚುನಾವಣಾ ವಿಚಾರ ಹೈಕೋರ್ಟ್ ಮೆಟ್ಟಿಲೇರಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಬಯೋಮೆಟ್ರಿಕ್ ಸ್ಮಾರ್ಟ್‌ಕಾರ್ಡ್ ವಿತರಿಸಲು ಮತ್ತು ಅದನ್ನೇ ಗುರುತಿನ ಚೀಟಿಯಾಗಿ ಬಳಸಲು ಅನುಮತಿ ನೀಡಿತ್ತು. ಅಲ್ಲದೆ ಬ್ಯಾನರ್, ಬಂಟಿಂಗ್ಸ್ ಬಳಸಬಾರದು ಎಂದು ತಾಕೀತು ಮಾಡಿತ್ತು.
ಭಾನುವಾರ ನಡೆದ ಚುನಾವಣೆಯು ಯಾವುದೇ ಸದ್ದುಗದ್ದಲವಿಲ್ಲದೆ ನಡೆಯಿತು. ಸ್ಮಾರ್ಟ್‌ಕಾರ್ಡ್‌ಗಳನ್ನು ಬೆರಳಚ್ಚು ಮೂಲಕ ಪರಿಶೀಲಿಸಿ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಯಾವುದೇ ಆಹಿತಕರ ಘಟನೆ ನಡೆಯದಂತೆ ಸೂಕ್ತ ಎಚ್ಚರವಹಿಸಲಾಗಿತ್ತು. ಕಾನೂನು ಸುವ್ಯವಸ್ಥೆಗೆಧಕ್ಕೆಯಾಗದಂತೆ 300 ಪೊಲೀಸರನ್ನು ನಿಯೋಜಿಸಲಾಗಿತ್ತು. ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 3 ಗಂಟೆಯ ತನಕ ಮತದಾನದಲ್ಲಿ ವಕೀಲರು ಹುರುಪಿನಿಂದ ಮತಚಲಾಯಿಸಿದರು. |