ಸಾಗರದಲ್ಲಿ ಸಚಿವ ಹರತಾಳು ಹಾಲಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ಜಟಾಪಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ, ಈ ಬಗ್ಗೆ ಇಬ್ಬರಿಂದಲೂ ವರದಿ ಕೇಳುವುದಾಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಗೆ ಇಬ್ಬರು ಮುಖಂಡರ ನಡುವಿನ ತಪ್ಪು ತಿಳಿವಳಿಕೆಯೇ ಕಾರಣವಾಗಿದೆ. ಆದರೆ ಇದು ಶಿಷ್ಟಚಾರದ ಉಲ್ಲಂಘನೆಯಲ್ಲ ಎಂದು ಪ್ರತಿಪಾದಿಸಿದ್ದಾರೆ.
ಸಚಿವ ಹಾಲಪ್ಪ ತಮ್ಮ ಅನೇಕ ಅಭಿವೃದ್ದಿ ಕೆಲಸಗಳ ನಡುವೆ ಪ್ರಗತಿ ಪರೀಶೀಲನೆ ನಡೆಸುವಾಗ ಇಂಥ ಗಡಿಬಿಡಿ ನಡೆದಿರಬಹುದು. ಅದನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ಷೇಪನೆ ವ್ಯಕ್ತಪಡಿಸಿದಾಗ ಭಿನ್ನಾಭಿಪ್ರಾಯಗಳೆದ್ದಿವೆ ವಿನಾಃ ಗಂಭೀರವಾದದ್ದೇನೂ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಮೂಲಕ ಸಚಿವ-ಶಾಸಕರ ನಡುವೆ ಸಾಗರದಲ್ಲಿ ಶನಿವಾರದ ನಡೆದ ಬಿರುಕಿಗೆ ತೇಪೆ ಹಾಕುವ ಪ್ರಕ್ರಿಯೆ ಪ್ರಾರಂಭ ಆಗಿದೆ. ಇದರಿಂದ ಸಾಕಷ್ಟು ಹಾನಿ ಉಂಟಾಗಿತ್ತು. ಈ ಬಗ್ಗೆ ಸ್ವತಃ ಯಡಿಯೂರಪ್ಪನವರೂ ಪ್ರತಿಕ್ರಿಯೆ ನೀಡಲು ಇಚ್ಛಿಸುತ್ತಿಲ್ಲ. ಒಟ್ಟಾರೆಯಾಗಿ ಈ ಪ್ರಕರಣದಿಂದ ಮತ್ತೊಮ್ಮೆ ಬಿಜೆಪಿಯಲ್ಲಿ ಒಡಕಾಗಿರುವುದು ಸ್ಪಷ್ಟವಾಗುತ್ತದೆ. |