ದೆಹಲಿ ಮೆಟ್ರೋ ದುರಂತವು ಬೆಂಗಳೂರು ಮೆಟ್ರೋ ಕಾಮಗಾರಿಯ ಮೇಲೆ ಪರಿಣಾಮ ಬೀರದು ಎಂಬವದಾಗಿ ಬೆಂಗಳೂರು ಮೆಟ್ರೋ ರೈಲ್ವೇ ಕಾರ್ಪೋರೇಶನ್ ಹೇಳಿದೆ. ದೆಹಲಿ ಯೋಜನೆಯಲ್ಲಿದ್ದಂತೆಯೆ ಬೆಂಗಳೂರು ಯೋಜನೆಯಲ್ಲೂ ಇಳಿಜಾರು ಹಾಗೂ ತಿರುವಿನ(ಕರ್ವ್) ಹಳಿಗಳಿವೆ. ಕಾಕತಾಳೀಯವೆಂಬಂತೆ ಮುಂದಿನ ಹದಿನೈದು ದಿನಗಳೊಳಗಾಗಿ ಬೆಂಗಳೂರು ಮೆಟ್ರೋದ ಮೊದಲ ತಿರುವಿನ ಭಾಗವು ಬ್ರಿಗೇಡ್ ರೋಡ್ ಎಂಜಿ ರೋಡ್ ಎಂಜಿ ರೋಡ್ ಜಂಕ್ಷನ್‌ನಲ್ಲಿ ಸಿದ್ಧವಾಗುತ್ತಿದೆ.
ಕಳೆದ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ಸಂಭವಿಸಿದ ದುರಂತವು ಬೆಂಗಳೂರು ಕಾಮಗಾರಿಯ ಮರುಪರಿಶೀಲನೆಗೆ ಕಾರಣವಾಗಿದ್ದು ಯೋಜನೆಯನ್ನು ಒಂದು ತಿಂಗಳು ವಿಳಂಬವಾಗಿಸಿತ್ತು. ಆದರೆ ಈ ಬಾರಿ ವಿಳಂಬವಾಗುವುದಿಲ್ಲ ಎಂಬುದಾಗಿ ಬಿಎಂಆರ್‌ಸಿ ಆಡಳಿತ ನಿರ್ದೇಶಕ ಎನ್. ಶಿವಶೈಲಂ ಹೇಳಿದ್ದಾರೆ. "ನಮ್ಮ ವಿನ್ಯಾಸದ ಮೇಲೆ ನಮಗೆ ವಿಶ್ವಾಸವಿದೆ. ನಮ್ಮ ಕಾರ್ಯದ ಕ್ಷಿಪ್ರ ಮರುಪರೀಕ್ಷೆ ನಡೆಸಲಾಗುವುದು ಮತ್ತು ನಮ್ಮ ತಿರುವು ಸ್ಟ್ರೆಚ್‌ಗಳ ಲೋಡಿಂಗ್ ವಿನ್ಯಾಸ ಮತ್ತು ಲಾಂಚಿಂಗ್ ತಂತ್ರವನ್ನು ಮತ್ತೊಮ್ಮೆ ಪರೀಕ್ಷಿಸಲಿದ್ದೇವೆ" ಎಂದು ಅವರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
"ಮೆಟ್ರೋ ಕೆಲಸದ ಪ್ರತಿ ಹಂತವನ್ನೂ ಪರೀಕ್ಷಿಸಲಾಗಿದೆ. ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ಮಹಿಸಲಾಗಿದೆ. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ನಮ್ಮ ಮೆಟ್ರೋವು ಸುರಕ್ಷಿತವಾಗಿದೆ" ಎಂದು ಅವರು ಪುನರುಚ್ಚರಿಸಿದ್ದಾರೆ. |