ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಾಣಯ್ಯ ಹುಚ್ಚುಚ್ಚಾಗಿ ಮಾತಾಡ್ತಾರೆ ಅಂದ ರೆಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಣಯ್ಯ ಹುಚ್ಚುಚ್ಚಾಗಿ ಮಾತಾಡ್ತಾರೆ ಅಂದ ರೆಡ್ಡಿ
ಸೋಮವಾರ ಸದನದಲ್ಲಿ ಅನುರಣಿಸಿದ ಆರೋಗ್ಯ ಇಲಾಖೆ ಅವ್ಯವಸ್ಥೆಗಳು ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರ ನಡುವೆ ವಾಕ್ಸಮರಕ್ಕೆ ನಾಂದಿಯಾಗಿದ್ದು, ಸದನದ ಅನಾರೋಗ್ಯಕ್ಕೆ ಕೆಡಿಸಿ, ಸದನ ಮುಂದೂಡಿ, ಬಳಿಕ ನಾಯಕರು ವಿಷಾದ ವ್ಯಕ್ತಪಡಿಸುವಂತಾಯಿತು.

ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ ರೋಗಗಳಂತಹ ಕಾಯಿಲೆಗಳಿಂದ ರಾಜ್ಯದಲ್ಲಿ ಜನ ಸಾಯುತ್ತಿದ್ದಾರೆ. ಆರೋಗ್ಯ ಇಲಾಖೆ ಅಸ್ತಿತ್ವದಲ್ಲಿಲ್ಲ, ಇಲಾಖೆ ಸತ್ತಿದೆ ಎಂಬುದಾಗಿ ಜೆಡಿಎಸ್‌ನ ಎಂ. ಸಿ. ನಾಣಯ್ಯ ಅವರು ಆರೋಗ್ಯ ಸಚಿವರನ್ನು ಉದ್ದೇಶಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಈ ಇಲಾಖೆಯನ್ನು ಮುಚ್ಚಿಬಿಡಿ ಎಂದು ಟೀಕಿಸಿದರು.

ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಶ್ರೀರಾಮುಲು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದಿರುವುದು ಹಿಂದಿನ ಸರ್ಕಾರದ ತಪ್ಪು ಎಂದು ಆರೋಪಿಸಿದರು. ಇದು ಪ್ರತಿಪಕ್ಷಗಳನ್ನು ಕೆರಳಿಸಿ, ನೀವು ಮಾಡಿರುವ ಘನಕಾರ್ಯಗಳನ್ನು ತೋರಿಸಿ ಎಂದು ಸವಾಲು ಹಾಕಿದರು.

ಇಷ್ಟರಲ್ಲಿ ತನ್ನ ಸ್ನೇಹಿತ ರಾಮುಲು ಸಹಾಯಕ್ಕೆ ಬಂದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ನಾವು ಆಡಳಿತಕ್ಕೆ ಬಂದು ಒಂದು ವರ್ಷ ಆಯಿತಷ್ಟೆ. ಹಿಂದಿನ ಆಡಳಿತ ರಾಜ್ಯವನ್ನು ಹಾಳು ಮಾಡಿದೆ. ಹಿರಿಯ ಸದಸ್ಯರಾದ ನಾಣಯ್ಯ ಹುಚ್ಚುಹುಚ್ಚಾಗಿ ಮಾತಾಡ್ತಾರೆ. ಮೊದಲು ಬಿಪಿ ಚೆಕ್ ಮಾಡ್ಸಿ ಎಂದಿದ್ದೇ ಸದನ ಗೊಂದಲದ ಗೂಡಾಯಿತು.

ರೆಡ್ಡಿ ಮಾತಿನಿಂದ ವ್ಯಗ್ರಗೊಂಡ ಸದಸ್ಯ ಶ್ರೀಕಂಠೇ ಗೌಡರು, ಹಿರಿಯ ಸದಸ್ಯ ನಾಣಯ್ಯ ಪ್ರಶ್ನೆ ಕೇಳಿದರೆ ಅವರಿಗೆ ಸಮಾಧಾನಕರ ಉತ್ತರ ನೀಡಬೇಕಿರುವುದು ಸಚಿವರ ಕರ್ತವ್ಯ. ಅದು ಬಿಟ್ಟು ಸಚಿವರು ಬಾಯಿಗೆ ಬಂದಂತೆ ಮಾತಾಡುತ್ತಾರೆ. ಅವರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಬಾವಿಗೆ ಧುಮುಕಿ ಜೆಡಿಎಸ್ ಸದಸ್ಯರೊಡನೆ ಸೇರಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿರುವಂತೆ ಸಭಾಪತಿಗಳು ಸದನವನ್ನು ಮುಂದೂಡಿದರು.

ಎಲ್ಲ ಮುಗಿದು ಸಮಾಧಾನವಾದ ಬಳಿಕ ತಮ್ಮತಮ್ಮ ಮಾತುಗಳಿಗೆ ಸಚಿವ ಜನಾರ್ದನ ರೆಡ್ಡಿ ಹಾಗೂ ನಾಣಯ್ಯ ಅವರು ವಿಷಾದ ವ್ಯಕ್ತಪಡಿಸಿದರು.

ಸಿದ್ದು-ಈಶ್ವರಪ್ಪ ಮಾತಿನ ಚಕಮಕಿ
ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆದ ಘಟನೆ ವಿಧಾನಸಭೆಯಲ್ಲಿ ನಡೆಯಿತು. ಪ್ರಶ್ನೋತ್ತರ ಕಲಾಪ ನಂತರ ಸರಗೊಬ್ಬರ ಕೊರತೆ ಸಂಬಂಧ ನಿಲುವಳಿ ಸೂಚನೆಗೆ ಸಿದ್ದರಾಮಯ್ಯ ಮುಂದಾದರು ಅಷ್ಟರಲ್ಲಿ ಅವರನ್ನು ಗೇಲಿಮಾಡಿದ ಈಶ್ವರಪ್ಪ, ಮೊನ್ನೆ ಪ್ರಸ್ತಾಪಿಸಿದ ಮೈಸೂರು ಕೋಮುಗಲಭೆ ವಿಷಯವನ್ನು ಕೈಬಿಟ್ಟು ಈಗ ರಸಗೊಬ್ಬರ ಎತ್ತಿದ್ದೀರಿ ಎಂದರು. ಮೊದಲು ಎತ್ತಿದ ವಿಷಯ ಚರ್ಚಿಸಿ ಬಳಿಕ ಇತರ ವಿಷಯದತ್ತ ಹೋಗುವುದು ನಿಯಮ ಆದರೆ, ಮೊದಲಿನ ವಿಷಯ ಬಿಟ್ಟು ಬೇರೊಂದು ವಿಷಯವನ್ನು ಪ್ರಸ್ತಾಪಿಸುತ್ತಿರುವ ಪ್ರತಿಪಕ್ಷದ ಬಗ್ಗೆ ಜನರು ಏನಂದುಕೊಂಡಾರು ಎಂದು ಚಚ್ಚಿದರು.

ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ಹೇಳಿಗೆ ಗದ್ದಲ ಆರಂಭಿಸಿದರು. ತಕ್ಷಣ ಎದ್ದು ನಿಂತ ಸಿದ್ದರಾಮಯ್ಯ ನಗೆಪಾಟಲಿಗೆ ಈಡಾಗಿರುವುದು ಯಾರೆಂಬುದು ಇಡೀ ದೇಶಕ್ಕೆ ಗೊತ್ತಿದೆ. ನಿಮ್ಮಿಂದ ನಾವು ಕಲಿಯುವ ಅಗತ್ಯವಿಲ್ಲ ಎಂದು ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡೆಲ್ಲಿ ಮೆಟ್ರೋ ಬೆಂ ಮೆಟ್ರೋ ಮೇಲೆ ಪರಿಣಾಮ ಬೀರದು
ಚರ್ಚ್ ದಾಳಿ: ಸರ್ಕಾರಕ್ಕೆ ಶೀಘ್ರವೇ ಮಧ್ಯಂತರ ವರದಿ
ಬೆಂಗಳೂರಲ್ಲಿ ತಿರುವಳ್ಳುವರ್: ಆ.9ರಂದು ಕರುಣಾ ಉದ್ಘಾಟನೆ
ಶಾಸಕ-ಸಚಿವರ ಗಲಾಟೆ: ವರದಿ ಕೇಳಿದ ಡಿವಿ
ಯೂರಿಯಾ ಕೋರಿ ಕೇಂದ್ರಕ್ಕೆ ಪತ್ರ: ಯಡಿಯೂರಪ್ಪ
ಧರ್ಮುಗೆ ಕ್ಲೀನ್‌ಚಿಟ್ ನೀಡಿ ತೆರಳಿದ ಠಾಕೂರ್!