ಸುಬ್ರಮಣ್ಯಪುರದಲ್ಲಿ ಜೂನ್ 7ರಂದು ನಡೆದ ನವೀನ್, ಗಿರೀಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 11ಮಂದಿ ಕೊಲೆ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಹಾಸನ ಜಿಲ್ಲೆ ಸಕಲೇಶಪುರದ ಬಳಿ ಕಾರ್ಯಾಚರಣೆ ನಡೆಸಿ ಕುಖ್ಯಾತ ರೌಡಿ ಅರಸಯ್ಯನ 11ಮಂದಿ ಸಹಚರರನ್ನು ಬಂಧಿಸಿದ್ದಾರೆಂದು ನಗರ ಪೊಲೀಸ್ ಕಮೀಷನರ್ ಶಂಕರ ಬಿದರಿ ತಿಳಿಸಿದ್ದಾರೆ.
ಬೆಂಗಳೂರು ಗೌರವ ನಗರದ ಶಿವಕುಮಾರ್ ಆಲಿಯಾಸ್ ಗುಂಡ(27), ರಾಮನಗರ ಜಿಲ್ಲೆ ಚನ್ನಪಟ್ಟಣ ಎಲೆಕೇರೆ ನ್ಯೂ ಎಕ್ಸ್‌ಟೆನ್‌ಷನ್ ವಾಸಿ ಮುದ್ದುಕೃಷ್ಣ ಆಲಿಯಾಸ್ ಮುದ್ದ(37), ಲಕ್ಷ್ಮೀದೇವಿನಗರದ ಆನಂದ(26), ಆರುಂಧತಿ ನಗರದ ಇನಾಯತ್‌ವುಲ್ಲಾ ಷರೀಫ್(22), ಕಂಠೀರವ ನಗರದ ಆಪ್ಪಿ ಅಲಿಯಾಸ್ ಶ್ರೀನಿವಾಸ್(22), ಬನ್ನೇರುಘಟ್ಟ ರಸ್ತೆಯ ಮಂಜುನಾಥ(19), ಜೆಪಿ ನಗರದ ಸತೀಶ್ ಆಲಿಯಾಸ್ ಸಚ್ಚಿ(24), ಮಾರೇನಹಳ್ಳಿಯ ಚಂದು ಆಲಿಯಾಸ್ ಡ್ರಮ್ (22), ಬೈರೇಶ್ ಅಲಿಯಾಸ್ ಭೈರ (18), ಬಾಗಾವರದ ಬಾಬು(28), ಹಾಗೂ ನೆಲಗೆದರಹಳ್ಳಿಯ ರಾಜು ಅಲಿಯಾಸ್ ಧರ್ಮರಾಜು (29) ಸೇರಿದಂತೆ 11 ಜನರನ್ನು ಬಂಧಿಸಿ, ಟಾಟಾಸುಮೋ 7ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದರು. |