ಕೃಷ್ಣಯ್ಯ ಶೆಟ್ರು, ನಮಗೆಲ್ಲಾ ತಿರುಪತಿ ಲಾಡು ತಂದು ಕೊಟ್ಟು, ಗಂಗಾಜಲ ಹಂಚಿದ್ರು, ಆಮೇಲೆ ಪಂಗನಾಮ ಹಾಕಿದರು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಅವರು ತಮ್ಮದೇ ದಾಟಿಯಲ್ಲಿ ಹಾಸ್ಯ ಚಟಾಕಿ ಹಾರಿಸಿದರು.ಕೃಷ್ಣಯ್ಯ ಶೆಟ್ಟಿಯವರು ವಸತಿ ಹಾಗೂ ಮುಜರಾಯಿ ಸಚಿವರಾಗಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಬಳಿ ನಿವೇಶನ ಹಂಚಿಕೆಗಾಗಿ ನೂರಾರು ಎಕರೆ ಜಮೀನು ಖರೀದಿಸಿ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಕಾರಣವಾಗಿದ್ದಾರೆ ಎಂಬುದನ್ನು ರೇವಣ್ಣ ಅವರು ಈ ರೀತಿ ವಿಶ್ಲೇಷಿಸಿದರು.ವಿಧಾನಸಭೆಯ ಮೊಗಸಾಲೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಶೆಟ್ರು, ನಮಗೆಲ್ಲಾ ತಿರುಪತಿ ಲಾಡು ತಿನ್ನಿಸಿ, ಗಂಗಾಜಲ ಕುಡಿಸಿ ಮೂರು ಪಂಗನಾಮ' ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು. |