ತಾನು ಪ್ರೇಮಿಸಿದ ಪ್ರಿಯತಮೆ ಧಕ್ಕಲಿಲ್ಲ ಎಂದು ಬೇಸರಗೊಂಡ ವ್ಯಕ್ತಿಯೊಬ್ಬರು ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ಸಾರಕ್ಕಿ ಗೇಟ್ ಪ್ರದೇಶದಲ್ಲಿ ಬುಧವಾರ ನಡೆದಿದೆ.
ನಗರದ ಎ.ಕೆ.ಕಾಲೋನಿ ನಿವಾಸಿಯಾಗಿರುವ ಆನಂದ್ (42) ಆತ್ಮಹತ್ಯೆ ಮಾಡಿಕೊಂಡವರು, ಆನಂದ್ ಅವರಿಗೆ ಈಗಾಗಲೇ ವಿವಾಹವಾಗಿ ಒಂದು ಮಗು ಕೂಡ ಇದೆ. ಆನಂದ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಅಲ್ಲದೇ ಅವಳನ್ನೇ ಮದುವೆಯಾಗುವ ಇಚ್ಛೆ ಹೊಂದಿದ್ದರು.
ಆದರೆ ಅವರು ಇನ್ನೊಂದು ಮದುವೆಯಾಗುವುದಕ್ಕೆ ಯುವತಿಯ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆನಂದ್ ಅವರು ಸಾವಿಗೆ ಶರಣಾಗಿದ್ದಾರೆ ಎಂದು ಜೆಪಿ ನಗರ ಪೊಲೀಸರು ತಿಳಿಸಿದ್ದಾರೆ. |