ಗಣಿಗಾರಿಕೆಗಾಗಿ ಕರ್ನಾಟಕ ಗಡಿಭಾಗವನ್ನು ಒತ್ತುವರಿ ಮಾಡಿಕೊಂಡಿರುವ ದೂರಿನ ಹಿನ್ನೆಲೆಯಲ್ಲಿ ಕೇಂದ್ರದ ಅಧಿಕಾರಿಗಳ ತಂಡ ಗುರುವಾರ ತುಮಟಿ ಗಣಿ ಪ್ರದೇಶ ಸೇರಿದಂತೆ ಗಡಿಭಾಗದಲ್ಲಿ ಜಂಟಿ ಸಮೀಕ್ಷೆ ಪ್ರಾರಂಭಿಸಿದೆ.
ತುಮಟಿ ಗಣಿಗಾರಿಕೆ ಪ್ರದೇಶದಲ್ಲಿ ಗಡಿ ನಿಯಮ ಉಲ್ಲಂಘಿಸಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕರ್ನಾಟಕ ಮತ್ತು ಆಂಧ್ರದ ಗಣಿ, ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಕಾರ್ಯವನ್ನು ಆರಂಭಿಸಿವೆ.
ರಾಜ್ಯ ಗಣಿ ಸಚಿವರ ಮಾಲೀಕತ್ವದಲ್ಲಿರುವ ಓಬಳಾಪುರಂ ಮೈನ್ಸ್ ಕಂಪೆನಿಯು ಕರ್ನಾಟಕ-ಆಂಧ್ರ ಗಡಿ ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ಈ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದರಂತೆ ಕೇಂದ್ರ ಸರ್ಕಾರ ಗಡಿಸಮೀಕ್ಷೆ ಮುಂದಾಗಿದೆ. |