ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಮೆಗಾ' ವಂಚನೆ ಯೋಗೀಶ್ವರ್‌ಗೆ ಸುಪ್ರೀಂ ನೋಟಿಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಮೆಗಾ' ವಂಚನೆ ಯೋಗೀಶ್ವರ್‌ಗೆ ಸುಪ್ರೀಂ ನೋಟಿಸ್
'ಮೆಗಾಸಿಟಿ' ಹೆಸರಲ್ಲಿ ನಿವೇಶನ ನೀಡುವುದಾಗಿ ಭರವಸೆ ನೀಡಿ ಸಾವಿರಾರು ಜನರನ್ನು ವಂಚಿಸಿರುವ ಆರೋಪ ಎದುರಿಸುತ್ತಿರುವ ಮೆಗಾಸಿಟಿ ಡೆವಲಪರ್ಸ್ ಅಂಡ್ ಬಿಲ್ಡರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೆ ಆದೇಶಿಸಿದೆ.

ಯೋಗೇಶ್ವರ್ ವಿರುದ್ಧ ಸುಮಾರು 80ಕ್ಕೂ ಅಧಿಕ ಮಂದಿ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಎನ್.ಅಗರ್‌ವಾಲ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಜಾರಿ ಮಾಡಿದೆ.

ನಗರದ ಮೈಸೂರು ರಸ್ತೆಯ ವಿವಿಧ ಗ್ರಾಮಗಳಲ್ಲಿ ಮೆಗಾಸಿಟಿ ಯೋಜನೆಯಡಿ ನಿರ್ಮಿಸಲಾದ ವಜ್ರಗಿರಿ ಟೌನ್‌ಶಿಪ್ ಬಳಿ ನಿವೇಶನ ಕೊಳ್ಳುವ ಜನರಿಗೆ ರಸ್ತೆ, ಒಳಚರಂಡಿ, ವಿದ್ಯುತ್, ನೀರು ಹೀಗೆ ಎಲ್ಲ ಮೂಲ ಸೌಕರ್ಯಗಳು ಒದಗಿಸುವುದಾಗಿ ಆಮಿಷ ಒಡ್ಡಿದ ಯೋಗೇಶ್ವರ್, ಈ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನೂ ನೀಡಿ ವಂಚನೆ ಎಸಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

1995ರಿಂದ 2000ರ ಅವಧಿಯಲ್ಲಿ 10ಸಾವಿರಕ್ಕೂ ಅಧಿಕ ಜನರಿಂದ 68ಕೋಟಿ ರೂಪಾಯಿಗೂ ಮಿಕ್ಕಿದ ಹಣವನ್ನು ವಸೂಲು ಮಾಡಿರುವ ಯೋಗೀಶ್ವರ್, ವಂಚನೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ನಿವೇಶನಕ್ಕಾಗಿ ಹಣ ನೀಡಿದವರಿಗೆ ಪರಿಹಾರದ ರೂಪದಲ್ಲಿ ವಾರ್ಷಿಕವಾಗಿ 18ರ ಬಡ್ಡಿದರದ ಜೊತೆಗೆ 1ಲಕ್ಷ ರೂಪಾಯಿ ನೀಡುವಂತೆ ರಾಷ್ಟ್ರೀಯ ಗ್ರಾಹಕ ವೇದಿಕೆ ಆದೇಶಿಸಿತ್ತು. ಈ ಆದೇಶ ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರ್ಕಾರದಿಂದ ಮಹಿಳೆಯರಿಗೆ ರಕ್ಷಣೆ ಇಲ್ಲ; ಪ್ರತಿಪಕ್ಷ ವಾಗ್ದಾಳಿ
ಭೂಹಗರಣ;ಇಂದಿನ ಕಲಾಪವೂ ಗದ್ದಲದಲ್ಲೇ ಅಂತ್ಯ
ಜುಲೈ 22ರಂದು ಗ್ರಹಣಗಳ ಕೌತುಕ ನೋಡಿ!
ವಿಮಾನ ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರ: ಯಡಿಯೂರಪ್ಪ
ಗಡಿ ಒತ್ತುವರಿ;ಜಂಟಿ ಸಮೀಕ್ಷೆಗೆ ಚಾಲನೆ
ರಾಜಭವನದ ಮೆಟ್ಟಿಲೇರಿದ ಭೂ ಹಗರಣ