ರಾಜ್ಯದ ಮೇಲೆ 65 ಸಾವಿರ ಕೋಟಿ ರೂಪಾಯಿ ಸಾಲದ ಭಾರ ಇದ್ದು, ಪ್ರತಿಯೊಬ್ಬ ನಾಗರಿಕನ ತಲೆ ಮೇಲೆ 11ಸಾವಿರ ರೂಪಾಯಿ ಸಾಲದ ಹೊರೆ ಇರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಸದನಕ್ಕೆ ಮಾಹಿತಿ ನೀಡುತ್ತ ತಿಳಿಸಿದರು.ಜೆಡಿಎಸ್‌ನ ಎಚ್.ಸಿ.ನೀರಾವರಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ರಾಜ್ಯದ ಒಟ್ಟು ಆದಾಯದ ಶೇ.28ರಷ್ಟು ಸಾಲ ಇದೆ. ಆ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಬ್ಬರ ತಲೆಯ ಮೇಲೂ 11 ಸಾವಿರ ರೂಪಾಯಿಗಳ ಸಾಲ ಇದೆ ಎಂದರು.ಅಲ್ಲದೇ ಜಾಗತಿಕ ಆರ್ಥಿಕ ಹೊಡೆತದಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಸಂಪನ್ಮೂಲದಲ್ಲಿ 6721 ಕೋಟಿ ರೂಪಾಯಿ ಕೊರತೆ ಉಂಟಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಆಡಳಿತ ಪಕ್ಷದ ಮನೋಹರ ಮಸ್ಕಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಸಂಪನ್ಮೂಲ ಕೊರತೆಯನ್ನು ನೀಗಿಸಿಕೊಳ್ಳಲು ಯೋಜನಾ ವೆಚ್ಚಗಳ ಮೇಲೆ ನಿಗಾ ಇರಿಸಲಿದ್ದು, ಯೋಜನೇತರ ವೆಚ್ಚಗಳನ್ನು ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು. |