ವಾಣಿಜ್ಯ ನಿವೇಶನ ಮಂಜೂರಾತಿ ವಿಚಾರದಲ್ಲಿ ಹಲವು ವರ್ಷಗಳಿಂದ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಬಿಬಿಎಂಪಿ ಆಯುಕ್ತಕ ವಿರುದ್ಧ ಹೊರಡಿಸಿದ್ದ ಜಾಮೀನು ರಹಿತ ವಾರಂಟ್ ಅನ್ನು ಗುರುವಾರ ಹಿಂಪಡೆದಿದೆ.
ಆದರೆ ಮುಂದೆ ಇಂತಹ ಘಟನೆಗಳಿಗೆ ಅವಕಾಶ ಕೊಡದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಹಾಗೂ ಈ ಬಗ್ಗೆ ತಮ್ಮ ಅಧೀನ ಅಧಿಕಾರಿಗಳಿಗೂ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯಕ್ಕೆ ಹಾಜರಾದ ಬಿಬಿಎಂಪಿ ಆಯುಕ್ತ ಭರತ್‌ಲಾಲ್ ಮೀನಾ ಅವರಿಗೆ ನ್ಯಾ.ರಾಮಮೋಹನ್ ರೆಡ್ಡಿ ನಿರ್ದೇಶನ ನೀಡಿದರು.
ಪ್ರಕಾಶ್ ಎನ್ನುವವರಿಗೆ ವ್ಯಾಪಾರ ನಡೆಸಲು ವಾಣಿಜ್ಯ ನಿವೇಶನವೊಂದನ್ನು 30 ವರ್ಷದ ಗುತ್ತಿಗೆ ಆಧಾರದ ಮೇಲೆ ಆಗಿನ ಬಿಎಂಪಿ ಟಿಂಬರ್ ಯಾರ್ಡ್ ಮಂಜೂರು ಮಾಡಿತ್ತು. ಆದರೆ ಅದೇ ವರ್ಷ ನಿರ್ಣಯವೊಂದನ್ನು ತೆಗೆದುಕೊಂಡು ನಿವೇಶನದ ಸ್ವಾಧೀನ ತೆಗೆದುಕೊಂಡವರಿಗೆ ಅದನ್ನು ಕಾಯಂ ಮಾಡಿತ್ತು. ಆದರೆ ಅದೇ ವರ್ಷದಲ್ಲಿ ನಿರ್ಣಯವೊಂದನ್ನು ತೆಗೆದುಕೊಂಡು ನಿವೇಶನದ ಸ್ವಾಧೀನ ತೆಗೆದುಕೊಂಡವರಿಗೆ ಅದನ್ನು ಕಾರ್ಯ ಮಾಡಿತ್ತು. ಆದರೆ ಆ ಸಂದರ್ಭದಲ್ಲಿ ಪ್ರಕಾಶ್ ಅವರ ಹೆಸರನ್ನು ಕೈ ಬಿಡಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆದರೆ 1997 ಮತ್ತು 2001ರಲ್ಲಿ ಹೈಕೋರ್ಟ್ ಆದೇಶ ನೀಡಿದ್ದರೂ ಪರ್ಯಾಯ ನಿವೇಶನ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಮತ್ತೆ ಅವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಬಿಬಿಎಂಪಿ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ ಆದೇಶ ವಾಪಸ್ ಪಡೆಯಲಾಯಿತು. |