ಕರ್ನಾಟಕದ ಐದು ವಿಧಾನಸಭಾ ಕ್ಷೇತ್ರಗಳಿಗೆ ಆಗೋಸ್ಟ್ 18ರಂದು ಉಪ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ನಿರ್ಧರಿಸಿದೆ.
ರಾಜ್ಯದ ಗೋವಿಂದರಾಜ್ ನಗರ, ಚಿತ್ತಾಪೂರ್, ರಾಮನಗರ, ಕೊಳ್ಳೇಗಾಲ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಆಗೋಸ್ಟ್ 18ರಂದು ಉಪ ಚುನಾವಣೆ ನಡೆಯಲಿದೆ.
ಅಲ್ಲದೇ ತಮಿಳುನಾಡಿನ ಐದು, ಉತ್ತರ ಪ್ರದೇಶದ ನಾಲ್ಕು, ಪಶ್ಚಿಮ ಬಂಗಾಳದ ಎರಡು ಹಾಗೂ ಮೇಘಾಲಯದ ಒಂದು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವುದಾಗಿ ಈಗಾಗಲೇ ಘೋಷಿಸಿತ್ತು.
ಚುನಾವಣೆ ಅಂಗವಾಗಿ ಜುಲೈ 22ರಂದು ಪ್ರಕಟಣೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆಗೆ ಜುಲೈ 29 ಕೊನೆಯ ದಿನಾಂಕ, 30ರಂದು ನಾಮಪತ್ರ ಪರಿಶೀಲನೆ. ನಾಮಪತ್ರ ಹಿಂತೆಗೆಯಲು ಆಗೋಸ್ಟ್ 1 ಅಂತಿಮ ದಿನಾಂಕ ಎಂದು ಆಯೋಗ ತಿಳಿಸಿದೆ. |