ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರಿನಲ್ಲಿ ಮುಳುಗುತ್ತಿರುವ ಹಡಗು; 18 ಸಿಬ್ಬಂದಿಗಳ ರಕ್ಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರಿನಲ್ಲಿ ಮುಳುಗುತ್ತಿರುವ ಹಡಗು; 18 ಸಿಬ್ಬಂದಿಗಳ ರಕ್ಷಣೆ
ನವಮಂಗಳೂರು ಬಂದರಿನಿಂದ ಚೀನಾಕ್ಕೆ ಹೊರಟಿದ್ದ ಸರಕು ಸಾಗಣೆ ಹಡಗೊಂದು ಕರಾವಳಿಯಿಂದ ಆರು ನಾಟಿಕಲ್ ಮೈಲು ದೂರದಲ್ಲಿ ಅಪಾಯಕ್ಕೆ ಈಡಾದ ಹಿನ್ನಲೆಯಲ್ಲಿ ಅದರಲ್ಲಿದ್ದ 18 ಸಿಬ್ಬಂದಿಗಳನ್ನು ರಕ್ಷಿಸಲಾಗಿದ್ದು, ಹಡಗು ಮುಳುಗಡೆ ಭೀತಿ ಎದುರಿಸುತ್ತಿದೆ.

ನವಮಂಗಳೂರು ಬಂದರಿನಿಂದ ಶುಕ್ರವಾರ ಬೆಳಿಗ್ಗೆ 9.30ರ ಹೊತ್ತಿಗೆ 13,600 ಟನ್ ಕಬ್ಬಿಣದ ಅದಿರನ್ನು ಹೊತ್ತುಕೊಂಡು ಪ್ರಯಾಣ ಆರಂಭಿಸಿದ್ದ 'ಎಂ.ವಿ. ಏಷಿಯನ್ ಫಾರೆಸ್ಟ್' ಎಂಬ ಹಾಂಕಾಂಗ್ ಹಡಗು ಚೀನಾದತ್ತ ಹೊರಟಿತ್ತು.

ಕರಾವಳಿಯಿಂದ ಸುಮಾರು 37 ಕಿ.ಮೀ. ದೂರ ಸಾಗುತ್ತಿದ್ದಂತೆ ಹಡಗು ಸಮತೋಲನ ಕಳೆದುಕೊಳ್ಳಲಾರಂಭಿಸಿತು. ಹಡಗಿಗೆ ಅದಿರು ತುಂಬುವ ಸಂದರ್ಭದಲ್ಲಿ ಮಳೆ ನೀರು ಕೂಡ ಸೇರಿಕೊಂಡಿದ್ದರ ಪರಿಣಾಮ ಪ್ರಯಾಣದ ಸಂದರ್ಭದಲ್ಲಿ ಹಡಗು ಅತ್ತಿತ್ತ ಓಲಾಡಲು ಕಾರಣವಾಯಿತು. ಇದರಿಂದಾಗಿ ಅದಿರು ಹಡಗಿನ ಒಂದೇ ಬದಿಗೆ ಸೇರಿಕೊಂಡ ಕಾರಣ ಹಡಲು ಸಮತೋಲನ ಕಳೆದುಕೊಂಡಿತು.

ತಕ್ಷಣವೇ ಹಡಗಿನ ಕ್ಯಾಪ್ಟನ್ ನವಮಂಗಳೂರು ಬಂದರು ಮಂಡಳಿಯ ಮರೈನ್ ವಿಭಾಗಕ್ಕೆ ಮಾಹಿತಿ ಕೊಟ್ಟರು. ನಂತರ ಕರಾವಳಿ ತಟ ರಕ್ಷಣಾ ಪಡೆಯವರು ಕೂಡ ಸ್ಥಳಕ್ಕಾಗಮಿಸಿ ಹಡಗಿನಲ್ಲಿದ್ದ ಚೀನಾದ 18 ಸಿಬ್ಬಂದಿಗಳನ್ನು ಅಪಾಯದಿಂದ ಪಾರು ಮಾಡಿದ್ದಾರೆ.

ಕೋಸ್ಟ್ ಗಾರ್ಡ್‌ನ ಎಂಟು ಮಂದಿ ಅಧಿಕಾರಿಗಳು ಮತ್ತು ಎನ್‌ಎಂಪಿಟಿಯ ಸಿಬಂದಿಗಳು ಸೇರಿದಂತೆ 80 ಮಂದಿಯ ತಂಡವು 'ಸಂಕಲ್ಪ್' ಎನ್ನುವ ಹಡಗಿನಲ್ಲಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತು ಎಂದು ಮೂಲಗಳು ತಿಳಿಸಿವೆ.

ಎಡೆಬಿಡದೆ ಬರುತ್ತಿರುವ ಭಾರೀ ಮಳೆ ಮತ್ತು ಗಾಳಿಯ ಕಾರಣ ಕಡಲು ಕೂಡ ಪ್ರಕ್ಷ್ಯುಬ್ದ ಸ್ಥಿತಿ ತಲುಪಿದೆ. ಹಾಗಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಅಭಿಪ್ರಾಯಪಡಲಾಗಿದೆ.

ಇದೀಗ ಹಡಗು ಮುಳುಗುವುದು ಖಚಿತ ಎನ್ನಲಾಗುತ್ತಿದೆ. ಆರಂಭದಲ್ಲಿ 15 ಡಿಗ್ರಿಗಳಷ್ಟು ವಾಲಿದ್ದ ಹಡಗು ಸಂಜೆ ಹೊತ್ತಿಗೆ 30 ಡಿಗ್ರಿ ವಾಲಿಕೊಂಡಿದೆ. ನಿಧಾನವಾಗಿ ಹಡಗು ಮುಳುಗುವ ಸಾಧ್ಯತೆಗಳಿವೆ. ಆದರೂ ಹಡಗನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿವೆ ಎಂದು ಸಂಬಂಧಪಟ್ಟವರು ವಿವರಿಸಿದ್ದಾರೆ.

ಈ ಹಡಗೂ ಮುಳುಗಿದಲ್ಲಿ ಇತ್ತೀಚಿನ ವರ್ಷಗಳಲ್ಲಿ ನವಮಂಗಳೂರು ವ್ಯಾಪ್ತಿಯ ಕರಾವಳಿಯಲ್ಲಿ ಕಡಲಾಳ ಸೇರಿದ ಮೂರನೇ ಹಡಗು ಇದಾಗಲಿದೆ. ಈ ಹಿಂದೆ ಏಟ್ರಿಯಾದ ಡೆನ್‌ಡೆನ್ ಮತ್ತು ಅದಕ್ಕೂ ಮೊದಲು ಫ್ರಾನ್ಸ್‌ನ ಹಡಗೊಂದು ಇಲ್ಲಿ ಮುಳುಗಡೆಯಾಗಿತ್ತು. ಚೀನಾದ ಮತ್ತೊಂದು ಹಡಗು ಕಳೆದೆರಡು ವರ್ಷಗಳ ಹಿಂದೆ ಅಪಾಯಕ್ಕೆ ಸಿಲುಕಿತ್ತಾದರೂ ಅದನ್ನು ರಕ್ಷಿಸಲಾಗಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆ.18ರಂದು ರಾಜ್ಯದ 5ಕ್ಷೇತ್ರಗಳಲ್ಲಿ ಉಪಚುನಾವಣೆ
ದಾವಣಗೆರೆಯಲ್ಲಿ ಮತ್ತೆ ಭುಗಿಲೆದ್ದ ಗೊಬ್ಬರ ಗಲಾಟೆ
ಪೊಲೀಸ್ ಕಾನ್‌ಸ್ಟೇಬಲ್ ಕತ್ತು ಸೀಳಿ ಕೊಲೆ
ಸಂಸದೆ ಜೆ.ಶಾಂತಾಗೆ ಹೈಕೋರ್ಟ್ ಸಮನ್ಸ್
ಉಗ್ರಪ್ಪಗೆ ಹುಚ್ ಹಿಡಿದಿದೆ;ಆಸ್ಪತ್ರೆಗೆ ಸೇರಿಸಿ: ಈಶ್ವರಪ್ಪ
ಆಂಧ್ರ ಶಾಸಕರ ವಿರುದ್ಧ ಕೇಂದ್ರಕ್ಕೆ ದೂರು: ಬೊಮ್ಮಾಯಿ