ಆಸ್ತಿಗಾಗಿ ಪತ್ನಿಯ ಜತೆ ಸೇರಿಕೊಂಡು ಹೆತ್ತವರನ್ನೇ ಕೊಲೆ ಮಾಡಿದ ಆರೋಪದ ಮೇಲೆ ಜ್ಯೋತಿಕುಮಾರ್(51) ಮತ್ತು ವರಲಕ್ಷ್ಮೀ 38) ಎಂಬುವರನ್ನು ಸಂಪಂಗಿರಾಮನಗರ ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ವಾಸವಿದ್ದ ತಂದೆ ವೆಂಕಟಸ್ವಾಮಿ(75) ಹಾಗೂ ತಾಯಿ ಲಕ್ಷ್ಮಮ್ಮ(68) ಅವರನ್ನು ಮಗ ಮತ್ತು ಸೊಸೆ ಸೇರಿ ಕಬ್ಬಿಣದ ಸಲಾಕೆಯಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.
ವೃದ್ಧ ದಂಪತಿಗಳು ವಾಸಿಸುತ್ತಿದ್ದ ಮನೆಯನ್ನು ಖಾಲಿ ಮಾಡುವಂತೆ ಆರೋಪಿಗಳು ಬೆದರಿಸಿದ್ದರು. ಇದಕ್ಕೆ ಒಪ್ಪದಿದ್ದಾಗ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿಯ ಹೆಸರಿನಲ್ಲಿದ್ದ ನಿವೇಶನವನ್ನು ಮಾರಾಟ ಮಾಡಿದ್ದ ಆರೋಪಿಗಳು ಒಂಬತ್ತು ಲಕ್ಷ ರೂಪಾಯಿ ಹಣವನ್ನು ಪಡೆದಿದ್ದರು ಎಂದು ಕೂಡ ಪೊಲೀಸರು ಹೇಳಿದ್ದಾರೆ. |