ಹದಿನಾಲ್ಕು ವಿವಿಧ ವಿಶ್ವವಿದ್ಯಾನಿಲಯಗಳ ನಕಲಿ ಅಂಕಪಟ್ಟಿಗಳನ್ನು ತಯಾರಿಕೆ ಮಾಡುತ್ತಿದ್ದ ಇಬ್ಬರು ಖದೀಮರನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಸೀಮಾ(27), ಮೊಹಮದ್ ಸಯೀದ್(40ವ) ಬಂಧಿತ ಆರೋಪಿಗಳಾಗಿರುವ ಇವರಿಂದ ಹದಿನಾಲ್ಕು ವಿಶ್ವವಿದ್ಯಾನಿಲಯಗಳ ನಕಲಿ ಅಂಕಪಟ್ಟಿ, ಅಂಕಪಟ್ಟಿ ತಯಾರಿಕೆಗೆ ಬಳಸಿದ್ದ ಕಂಪ್ಯೂಟರ್ ಹಾಗೂ ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಅಸಲಿ ಅಂಕಪಟ್ಟಿಗಳನ್ನು ಕಂಪ್ಯೂಟರ್‌ನಲ್ಲಿ ಕೊರಲ್ ಡ್ರಾ ಎಂಬ ಸಾಫ್ಟ್‌ವೇರ್ ಬಳಸಿ ಸ್ಕ್ಯಾನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅದರ ಮೇಲೆ ತಮಗೆ ಬೇಕಾದ ವ್ಯಕ್ತಿಗಳ ಹೆಸರು ಹಾಗೂ ಗಳಿಸಿದ ಅಂಕಗಳನ್ನು ತಿದ್ದುಪಡಿ ಮಾಡಿ ನಕಲಿ ಅಂಕಪಟ್ಟಿಯನ್ನು ಪ್ರಿಂಟ್ ಮೂಲಕ ತೆಗೆಯುತ್ತಿದ್ದರು.
ಫ್ರೇಜರ್ ಟೌನ್ ಉಪವಿಭಾಗದ ಎಸಿಪಿ ಬಿಬಿ ಅಶೋಕ್ ಕುಮಾರ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಫ್ರೇಜರ್‌ಟೌನ್ ಎಸಿಪಿ ಸ್ಕ್ವಾಡ್ ಡಿ.ಜೆ.ಹಳ್ಳಿಯ ಅಂಬೇಡ್ಕರ್ ಕಾಲೇಜಿನ ಹತ್ತಿರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. |