ನಗರದ ಜ್ಞಾನಭಾರತಿ ಸಮೀಪ ಮತಾಂತರಕ್ಕೆ ಯತ್ನಿಸಿದ್ದ ನಾಲ್ವರು ಕ್ರೈಸ್ತ ಮತಪ್ರಚಾರಕರಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.
ಇಲ್ಲಿನ ಜ್ಞಾನಜ್ಯೋತಿ ನಗರದಲ್ಲಿ ನಾಲ್ವರು ಕ್ರೈಸ್ತ ಮತ ಪ್ರಚಾರಕರು ಬಲವಂತವಾಗಿ ಮತಾಂತರಕ್ಕೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರೊಂದಿಗೆ ಮಾತಿನ ಚಕಮಕಿ ನಡೆದಿತ್ತು. ನಂತರ ನಾಲ್ವರಿಗೂ ಸ್ಥಳೀಯರು ಗೂಸಾ ನೀಡಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಜ್ಞಾನಭಾರತಿ ಪೊಲೀಸರು ಆಗಮಿಸಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡರು.
ಮತಪ್ರಚಾರಕರು ಹಣದ ಆಮಿಷ ಒಡ್ಡಿ ಮತಾಂತರಕ್ಕೆ ಯತ್ನಿಸಿದ ಸಂದರ್ಭದಲ್ಲಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದಾಗ ನಾಲ್ವರು ವಾಗ್ವಾದಕ್ಕೆ ಇಳಿದಿದ್ದರು. ಬಂಧಿತರನ್ನು ಮದನ್ ಕುಮಾರ್, ಮುನೀಂದ್ರ ಕಾಲರ್, ಅಮರಸಿಂಗ್ ಹಾಗೂ ಜೇಮ್ಸ್ ವೆಸ್ಲಿ ಎಂದು ಗುರುತಿಸಲಾಗಿದೆ. |