ಮುಖ್ಯಮಂತ್ರಿಗಳ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಬಿಜೆಪಿಯ ಏಳು ಸಂಸದರು, ಒಬ್ಬ ಶಾಸಕ ಹಾಗೂ ಇಬ್ಬರು ಮಾಜಿ ಶಾಸಕರಿಗೆ ಜಿ ಪ್ರವರ್ಗದಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ನಗರಾಭಿವೃದ್ಧಿ ಇಲಾಖೆ ಶನಿವಾರ ಒಟ್ಟು 11 ಗಣ್ಯರಿಗೆ ನಿವೇಶನಗಳ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ನಿವೇಶನ ಪಡೆದ 11 ಜನರದಲ್ಲಿ ಹತ್ತು ಮಂದಿ ಬಿಜೆಪಿ ಪಕ್ಷಕ್ಕೆ ಸೇರಿದವರು. ಮತ್ತೊಬ್ಬರಿಗೆ ಸಮಾಜಸೇವೆ ವಿಭಾಗದಲ್ಲಿ ನಿವೇಶನ ನೀಡಲಾಗಿದೆ. ಇವರಿಗೆ ಮಾತ್ರ 60 ಮತ್ತು 40 ಅಡಿ ನಿವೇಶನ ನೀಡಿದ್ದರೆ, ಉಳಿದ 10ಮಂದಿಗೆ 50ಮತ್ತು 80 ಅಡಿಯ ನಿವೇಶನ ಮಂಜೂರು ಮಾಡಲಾಗಿದೆ.ಸಂಸದ ಬಿ.ವೈ.ರಾಘವೇಂದ್ರ(ಶಿವಮೊಗ್ಗ), ಜನಾರ್ದನ ಸ್ವಾಮಿ(ಚಿತ್ರದುರ್ಗ), ರಮೇಶ್ ಕತ್ತಿ(ಚಿಕ್ಕೋಡಿ), ಎಸ್.ಫಕೀರಪ್ಪ(ರಾಯಚೂರು), ಶಿವರಾಮಗೌಡ(ಕೊಪ್ಪಳ), ಜೆ.ಶಾಂತಾ(ಬಳ್ಳಾರಿ), ನಳಿನ್ ಕುಮಾರ್ ಕಟೀಲ್(ದಕ್ಷಿಣ ಕನ್ನಡ), ಶಾಸಕ ಸತೀಶ ರೆಡ್ಡಿ(ಬೊಮ್ಮನಹಳ್ಳಿ), ಮಾಜಿ ಶಾಸಕರಾದ ರುಕ್ಮಯ್ಯ ಪೂಜಾರಿ, ಜಯರಾಮಶೆಟ್ಟಿ ಮತ್ತು ಸಮಾಜ ಸೇವಕ ಪಿ.ವಿ.ಕೃಷ್ಣ ಭಟ್ ಸೇರಿದಂತೆ 11ಮಂದಿಗೆ ನಿವೇಶನ ನೀಡಲಾಗಿದೆ. |