ಕುಖ್ಯಾತ ಭೂಗತ ಪಾತಕಿ, ಬನ್ನಂಜೆ ಬನ್ನಂಜೆ ರಾಜಾನ ನಿಕಟವರ್ತಿ ಸಿರಾಜ್ ಹಸನ್ ಎಂಬಾತನನ್ನು ಉಡುಪಿ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಹಲವಾರು ಕೊಲೆ, ಹಲ್ಲೆ, ಅಕ್ರಮ ಶಸ್ತ್ರಾಸ್ತ್ರ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಪಾತಕಿ ಸಿರಾಜ್ ಹಸನನ್ನು ಉಡುಪಿ ಪೊಲೀಸರು ಕಲ್ಯಾಣಪುರದಲ್ಲಿ ಬಂಧಿಸಿದ್ದರು. 2005ರಿಂದ ತಲೆಮರೆಸಿಕೊಂಡಿದ್ದ ಸಿರಾಜ್ ವಿರುದ್ಧ ಉಡುಪಿ, ಶಿರ್ವ, ಸುರತ್ಕಲ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು.
ಖಚಿತ ಮಾಹಿತಿ ಮೇರೆಗೆ ಉಡುಪಿ ಪೊಲೀಸರು ಕಾರ್ಯಾಚರಣೆ ನಡೆಸಿ ಸಿರಾಜ್‌ನನ್ನು ಬಂಧಿಸಿದ್ದು, ಆತನಿಂದ ಒಂದು ನಾಡ ಪಿಸ್ತೂಲ್, 4ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಬಂಧಿತ ಸಿರಾಜ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು ಜುಲೈ 23ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.
|