ಮಾಜಿ ಶಾಸಕ ಮಾಹಿಮಾ ಜೆ. ಪಟೇಲರು ಕೊನೆಗೂ ತಮ್ಮ ನಿರ್ಧಾರ ಬದಲಿಸಿಕೊಂಡಿದ್ದು, ಕಾಂಗ್ರೆಸ್‌ನತ್ತ ಒಲವು ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನವಣೆಗೂ ಮುನ್ನ ಸ್ವರ್ಣಯುಗ ಪಕ್ಷವನ್ನೇ ಮುಂದುವರಿಸಿಕೊಂಡು ಹೋಗಬೇಕೆಂಬ ಇಚ್ಛೆ ನನ್ನದಾಗಿತ್ತು. ಆದರೆ ತ್ಯಾಗದ ಭಾವನೆ ಕಾಂಗ್ರೆಸ್ ಪಕ್ಷದಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಗಾಂಧಿಯವರ ದೇಶದ ಪ್ರಧಾನಿ ಸ್ಥಾನವನ್ನೇ ಬೇರೆಯವರಿಗೆ 2 ಬಾರಿ ತ್ಯಾಗ ಮಾಡಿದ್ದಾರೆ. ಇಂಥ ತ್ಯಾಗ ಬದ್ಧತೆಯ ಮನೋಭಾವನೆಗಳುಳ್ಳ ಮುಖಂಡರಿರುವ ಕಾಂಗ್ರೆಸ್ ಪಕ್ಷದ ಕಡೆ ತಮ್ಮ ಮನ ಸೋತಿದೆ ಎಂದು ಹೇಳಿದರು.
ರಾಜ್ಯ ಮತ್ತು ದೇಶದ ರಾಜಕಾರಣವನ್ನು ಮಾಡುವ ಉದ್ದೇಶ ನನ್ನದಾಗಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. |