ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಂಗೂಬಾಯಿಗೆ ಸಂತಾಪ; ಕಲಾಪ ಮುಂದೂಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಂಗೂಬಾಯಿಗೆ ಸಂತಾಪ; ಕಲಾಪ ಮುಂದೂಡಿಕೆ
ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ.ಗಂಗೂಬಾಯಿ ಹಾನಗಲ್ ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಮಂಗಳವಾರ ಸಂತಾಪ ವ್ಯಕ್ತಪಡಿಸಿ ಅವರ ಗೌರವಾರ್ಥ ಸದನದ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

ಇಂದು ಸದನ ಆರಂಭವಾಗುತ್ತಿದ್ದಂತೆಯೇ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ ಖ್ಯಾತ ಗಾಯಕಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯೆಯಾದ ಗಂಗೂಬಾಯಿ ಹಾನಗಲ್ ನಿಧನವಾಗಿರುವುದಾಗಿ ಸದನಕ್ಕೆ ವಿಷಾದದಿಂದ ತಿಳಿಯಪಡಿಸುತ್ತೇನೆ ಎಂದರು.

ಸಂಗೀತ ಸೇವೆಯಲ್ಲದೆ ಜನಪರ ಹೋರಾಟಗಾರರಾಗಿದ್ದ ಡಾ.ಗಂಗೂಬಾಯಿ ಹಾನಗಲ್ ಗೋಕಾಕ್ ಚಳವಳಿ ಸಂದರ್ಭದಲ್ಲಿ ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರತಿಭಟಿಸಿದ್ದರಲ್ಲದೇ ಈದ್ಗಾ ಮೈದಾನ ವಿವಾದ ಬಗೆಹರಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು ಹೇಳಿದರು.

ಹಾನಗಲ್ ಅವರ ಹೆಸರನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ ಬಳಿ ಗುರುಕುಲ ಮಾದರಿಯ ಅಂತಾರಾಷ್ಟ್ರೀಯ ಸಂಗೀತ ಶಾಲೆಯನ್ನು ಸ್ಥಾಪಿಸಲಾಗುತ್ತಿದ್ದು, ಇದಕ್ಕೆ ಈ ಹಿಂದೆ ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 5ಕೋಟಿ ರೂ.ಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಿದ್ದು, ಇನ್ನು 3ತಿಂಗಳಲ್ಲಿ ಈ ವಿಶ್ವವಿದ್ಯಾಲಯ ಆರಂಭವಾಗಲಿದೆ. ಇದರ ಆರಂಭೋತ್ಸವವನ್ನು ಹಾನಗಲ್ ಅವರಿಂದಲೇ ಮಾಡಿಸಬೇಕೆಂದಿದ್ದೆವು ಆದರೆ ಅದು ಸಾಧ್ಯವಾಗಿಲ್ಲ ಎಂದು ನುಡಿದರು.

ಸಭಾಧ್ಯಕ್ಷರ ನುಡಿನಮನದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ ನಂತರ ಸದನದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯೋಗೀಶ್ವರ್ ನಿವಾಸದ ಮೇಲೆ ಅಧಿಕಾರಿಗಳ ದಾಳಿ
ಕೊಕೇನ್ ಮಾರಾಟ; ಕೀನ್ಯಾ ಪ್ರಜೆ ಬಂಧನ
ಬೀದರ್: ಶಾಲಾ ಬಿಸಿಯೂಟದಲ್ಲಿ ಹಾವಿನ ಮರಿ!
ಭಾಷಾ ಮಾಧ್ಯಮ: ರಾಜ್ಯ ಸರ್ಕಾರಕ್ಕೆ ಮತ್ತೆ ಮುಖಭಂಗ
ಲೋಕಾಯುಕ್ತ ಬೆದರಿಕೆಗೆ ಬಗ್ಗಲ್ಲಾ: ಸಂತೋಷ್ ಹೆಗ್ಡೆ
ತಮಿಳುನಾಡಿಗೆ ಕಾವೇರಿ ನೀರು: ಯಡಿಯೂರಪ್ಪ