ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉಪಚುನಾವಣೆಯಲ್ಲಿ ಭವಾನಿ ಸ್ಪರ್ಧೆಯಿಲ್ಲ: ದೇವೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಪಚುನಾವಣೆಯಲ್ಲಿ ಭವಾನಿ ಸ್ಪರ್ಧೆಯಿಲ್ಲ: ದೇವೇಗೌಡ
NRB
ಮಹತ್ವದ ಬೆಳವಣಿಗೆಯೊಂದರಲ್ಲಿ ರಾಮನಗರ ವಿಧಾನಸಭಾ ಉಪಚುನಾವಣೆಯಲ್ಲಿ ತಮ್ಮ ಕುಟುಂಬದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾದ ನಂತರ ತೆರವಾದ ರಾಮನಗರ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ದೇವೇಗೌಡರ ಸೊಸೆ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸುವ ಕುರಿತಂತೆ ವದಂತಿಗಳು ಹಬ್ಬಿದ್ದವು. ಆದರೆ ಈ ವದಂತಿಗಳನ್ನು ತಳ್ಳಿ ಹಾಕಿರುವ ಗೌಡರು, ಕುಟುಂಬ ಬೇರೆಯವರನ್ನು ಸ್ಪರ್ಧೆಗಿಳಿಸಲು ಯೋಜನೆ ಹಾಕಿಕೊಂಡಿದೆ ಎಂದರು.

ಈಗಾಗಲೇ ಅಭ್ಯರ್ಥಿಯ ಹುಡುಕಾಟದಲ್ಲಿರುವ ಜೆಡಿಎಸ್ ರಾಮನಗರ ಜಿಲ್ಲಾಧ್ಯಕ್ಷ ಕೆ. ರಾಜು ಅಥವಾ ಕನಕಪುರದ ವಿಧಾನಪರಿಷತ್ ಮಾಜಿ ಸದಸ್ಯ ಮರಿಲಿಂಗೇಗೌಡ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.

ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಬಲವಾಗಿ ಬೇರೂರಿದೆ. ಈ ವಿಶ್ವಾಸದಿಂದಲೇ ತಮ್ಮ ಕುಟುಂಬದ ಸದಸ್ಯರಲ್ಲದವರೂ ಗೆದ್ದು ಬರಲು ಯಾವುದೇ ಅಡೆ-ತಡೆಗಳಿಲ್ಲ ಎಂಬ ನಿರ್ಧಾರಕ್ಕೆ ಪಕ್ಷದ ಮುಖಂಡರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಬಿಎಂಪಿ ಚುನಾವಣೆ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ನಾರಾಯಣ ಮೂರ್ತಿ ಪುತ್ರಿ ಅಕ್ಷತಾಗೆ ಕಂಕಣ ಬಲ
ಗಂಗೂಬಾಯಿಗೆ ಸಂತಾಪ; ಕಲಾಪ ಮುಂದೂಡಿಕೆ
ಯೋಗೀಶ್ವರ್ ನಿವಾಸದ ಮೇಲೆ ಅಧಿಕಾರಿಗಳ ದಾಳಿ
ಕೊಕೇನ್ ಮಾರಾಟ; ಕೀನ್ಯಾ ಪ್ರಜೆ ಬಂಧನ
ಬೀದರ್: ಶಾಲಾ ಬಿಸಿಯೂಟದಲ್ಲಿ ಹಾವಿನ ಮರಿ!