ಸಂಸತ್ ಮತ್ತು ವಿಧಾನಮಂಡಲ ಕಲಾಪಗಳ ರೀತಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಕಲಾಪಗಳನ್ನೂ ದೂರದರ್ಶನದಲ್ಲಿ ನೇರ ಪ್ರಸಾರ ಮಾಡಬೇಕು ಎಂಬ ಮಹತ್ವದ ನಿರ್ಣಯವನ್ನು ರಾಜ್ಯ ವಕೀಲರ ಪರಿಷತ್ ತೆಗೆದುಕೊಂಡಿದೆ.
ಶನಿವಾರ ನಡೆದ ವಕೀಲರ ಪರಿಷತ್‌ನ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಇದಕ್ಕೆ ಬೆಂಬಲಿಸುವಂತೆ ಇತರ ರಾಜ್ಯಗಳ ವಕೀಲರ ಪರಿಷತ್ ಮತ್ತು ಭಾರತೀಯ ವಕೀಲರ ಪರಿಷತ್‌ನ್ನು ಕೋರಲು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್ ಅವರ ಈ ಪ್ರಸ್ತಾಪಕ್ಕೆ ಸಭೆ ಅನುಮೋದನೆ ನೀಡಿ ನಿರ್ಣಯ ಕೈಗೊಂಡಿತು. ಮಂಗಳವಾರ ಈ ಕುರಿತು ಪರಿಷತ್ತಿನ ಅಧ್ಯಕ್ಷ ಆರ್.ಅಬ್ದುಲ್ ರಿಯಾಜ್ ಖಾನ್ ಮಾಹಿತಿ ನೀಡಿದರು. |