ನಗರದ ಶಿರುಮಳ್ಳಿಯ ಮುರುಘಾ ಮಠದ ಬಸವರಾಜೇಂದ್ರ ಸ್ವಾಮೀಜಿಯವರು ಬುಧವಾರ ಉರಿಯುತ್ತಿರುವ ಜೋಳದ ಬಣವೆಗೆ ಹಾರಿ ಆತ್ಮಾಹುತಿ ಮಾಡಿಕೊಂಡ ಘಟನೆ ನಡೆದಿದೆ.
ಮೈಸೂರಿನ ನಂಜನಗೂಡಿನ ಸಮೀಪದ ಶಿರುಮಳ್ಳಿಯ ಮುರುಘಾಮಠದ 82ರ ಹರೆಯದ ಬಸವರಾಜೇಂದ್ರ ಸ್ವಾಮೀಜಿ ಉರಿಯುತ್ತಿರುವ ಜೋಳದ ಬಣವೆಗೆ ಹಾರಿ ಆತ್ಮಾಹುತಿ ಮಾಡಿಕೊಂಡಿದ್ದಾರೆ. ಆದರೆ ಸ್ವಾಮೀಜಿಯವರು ಏಕಾಏಕಿ ಅಗ್ನಿಪ್ರವೇಶ ಮಾಡಿ ಸಾವನ್ನಪ್ಪಿರುವುದಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.
ಹಿರಿಯ ಸ್ವಾಮೀಜಿಯಾಗಿರುವ ಬಸವರಾಜೇಂದ್ರ ಸ್ವಾಮಿಗಳ ಅಗ್ನಿಪ್ರವೇಶದಿಂದಾಗಿ ಭಕ್ತ ಸಮೂಹ ದಿಗ್ಭ್ರಾಂತವಾಗಿದೆ. ದಾವಣಗೆರೆಯಿಂದ ವಲಸೆ ಬಂದಿದ್ದ ಬಸವರಾಜೇಂದ್ರ ಸ್ವಾಮೀಜಿಗಳು 1956ರಲ್ಲಿ ಈ ಮಠವನ್ನು ಸ್ಥಾಪಿಸಿದ್ದರು.
ಜೋಳದ ಬಣವೆಗೆ ಹಾರಿ ಆತ್ಮಾಹುತಿ ಮಾಡಿಕೊಂಡ ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |