ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೊಳಿಸಬೇಕೆಂದು ಮುಸ್ಲಿಂ ಸಂಘಟನೆಗಳು ಒತ್ತಾಯಿಸುತ್ತಿರುವ ತಮ್ಮಧ್ಯೆಯೇ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸದಿರುವಂತೆ ಹಲವಾರು ದಲಿತ ಮತ್ತು ಮುಸ್ಲಿಂ ಪರ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ.
ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಜಾತಿ ವಿನಾಶ ವೇದಿಕೆಯ ಮುಖಂಡ ಲಕ್ಷ್ಮಣ್, ಡಿಎಸ್‌ಎಸ್ ಸಂಚಾಲಕ ಮಾವಳ್ಳಿ ಶಂಕರ್, ಟಿಪ್ಪು ಸುಲ್ತಾನ್ ರಂಗದ ಸರದಾರ ರಾಮನ್ ಖುರೇಷಿ ಸೇರಿದಂತೆ ಮುಂತಾದ ಮುಖಂಡರು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದರೆ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಅವರು, ಕಾಯ್ದೆಯನ್ನು ಕೈಬಿಡಲು ಹತ್ತು ದಿನಗಳ ಕಾಲ ಗಡುವು ನೀಡಿದೆ.
ಗೋಹತ್ಯೆ ನಿಷೇಧಿಸುವುದಾದರೆ ಎಲ್ಲ ಪ್ರಾಣಿಗಳ ಹತ್ಯೆ ನಿಷೇಧಿಸಲಿ ಎಂದು ಸವಾಲು ಹಾಕಿದ ಸಂಘಟನೆಗಳು, ಗೋಹತ್ಯೆ ಮಾಂಸ ಮಾರಾಟ ನಿಷೇಧದಿಂದ ಚರ್ಮೋದ್ಯಮ ಸಂಕಷ್ಟಕ್ಕೆ ಸಿಲುಕಲಿದೆ ಎಂದರು.
ಸರ್ಕಾರ ಮೊದಲು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ, ಮೈಸೂರಿನಲ್ಲಿ ನಡೆದ ಕೋಮು ಗಲಭೆ ಸತ್ಯಾಸತ್ಯತೆಗಳನ್ನು ಬಹಿರಂಗಪಡಿಸದೆ ಕೇವಲ ಮಾನವನ ಮೂಲಭೂತ ಹಕ್ಕುಗಳನ್ನು ನಿಯಂತ್ರಿಸಲು ಹೊರಟಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. |