ರಾಜ್ಯದಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಕರವೇ ಸೇರಿದಂತೆ ಕನ್ನಡ ಪರ ಸಂಘಟನೆಗಳು ಈಗಾಗಲೇ ಸರ್ಕಾರಕ್ಕೆ ನಾಲ್ಕು ಷರತ್ತನ್ನು ವಿಧಿಸಿ ಅಂತಿಮ ಗಡುವು ಕೂಡ ನೀಡಿದೆ. ಇದೀಗ ಪ್ರತಿಮೆ ಸ್ಥಾಪನೆ ಕುರಿತಂತೆ ಉಳಗಂ ತಮಿಳು ಕಳಗಂ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಸಿ.ತೆನ್ನಿವನ್ನನ್ ಉದ್ಧಟತನದ ಹೇಳಿಕೆ ನೀಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಕರ್ನಾಟದಲ್ಲಿ ವಾಸವಾಗಿರುವ ತಮಿಳರು ಅಬ್ಬೇಪಾರಿಗಳಲ್ಲ ಅವರು ರಾಜ್ಯದ ಪೂರ್ವಿಕರು. ಅಲ್ಲದೇ ರಾಜ್ಯದ ಕೀರ್ತಿ ಹೆಚ್ಚಿಸಿದ ಕನ್ನಂಬಾಡಿ ಕಟ್ಟೆ, ವಿಧಾನಸೌಧ ನಿರ್ಮಿಸಿದ್ದು ತಮಿಳು ಕೈಗಳು. ಕೋಲಾರ ಚಿನ್ನದ ಗಣಿ, ಕೈಗಾರಿಕೆ ಕ್ಷೇತ್ರಗಳಲ್ಲಿ ರಾಜ್ಯದ ಏಳಿಗೆಗೆ ಕಾರಣರಾದವರು ತಮಿಳರು ಎಂದು ತೆನ್ನಿವನ್ನನ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಶೇ.30ರಷ್ಟು ಜನಸಂಖ್ಯೆ ಹೊಂದಿರುವ ತಮಿಳ ನಾಗರಿಕರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನಡೆಸಿಕೊಳ್ಳಲಾಗುತ್ತಿದೆ. ವಿಧಾನಸಭೆ ಮತ್ತು ಬಿಬಿಎಂಪಿಗಳಲ್ಲಿ ನಮ್ಮ ಜನಪ್ರತಿನಿಧಿಗಳಿಲ್ಲದೆ ಇದ್ದಿದ್ದರಿಂದ ಧ್ವನಿಗೆ ಬೆಲೆ ಇಲ್ಲದಂತಾಗಿದೆ ಎಂದು ದೂರಿದ್ದಾರೆ. |