ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಾಹನಗಳಿಗೆ ಹೈ ಸೆಕ್ಯೂರಿಟಿ ನೋಂದಣಿ ಸಂಖ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಹನಗಳಿಗೆ ಹೈ ಸೆಕ್ಯೂರಿಟಿ ನೋಂದಣಿ ಸಂಖ್ಯೆ
ಭಯೋತ್ಪಾದನೆ, ನಕ್ಸಲ್ ಚಟುವಟಿಕೆಗೆ ಬಳಕೆಗೆ ತಡೆ...
ಕದ್ದ ವಾಹನಗಳನ್ನು ಕಳ್ಳಸಾಗಾಣಿಕೆ, ಭಯೋತ್ಪಾದನೆ ಹಾಗೂ ನಕ್ಸಲ್ ಚಟುವಟಿಕೆಗಳಿಗೆ ಬಳಸುವುದನ್ನು ತಡೆಯಲು ರಾಜ್ಯ ಸರ್ಕಾರ ವಾಹನಗಳಿಗೆ ಹೈ ಸೆಕ್ಯೂರಿಟಿ ನೋಂದಣಿ ಸಂಖ್ಯೆ ಪ್ಲೇಟ್‌ಗಳ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.

ರಾಷ್ಟ್ರದಲ್ಲಿ ಭಯೋತ್ಪಾದನೆ ಸೇರಿದಂತೆ ಇತರೆ ಸಮಾಜಘಾತುಕ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇವುಗಳ ತಡೆಗೆ ನಿರ್ಧರಿಸಿದ ಕೇಂದ್ರ ಸರ್ಕಾರ ವಾಹನಗಳಿಗೆ ಹೈ ಸೆಕ್ಯೂರಿಟಿ ನೋಂದಣಿ ಪ್ಲೇಟ್ ಅಳವಡಿಕೆ ವ್ಯವಸ್ಥೆಯನ್ನು 2001ರಲ್ಲಿ ಕೇಂದ್ರ ಮೋಟಾರು ವಾಹನ ನಿಯಮಕ್ಕೆ ತಿದ್ದುಪಡಿ ತಂದು ಜಾರಿಗೆ ತಂದಿದೆ.

ಈ ವ್ಯವಸ್ಥೆಯ ಅಳವಡಿಕೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ನೀಡಿದೆ. ಈ ರೀತಿಯ ವ್ಯವಸ್ಥೆಯನ್ನು ಈಗಾಗಲೇ ಮೇಘಾಲಯ, ರಾಜಸ್ಥಾನ್ ಸರ್ಕಾರಗಳು ಜಾರಿಗೆ ತಂದಿವೆ. ಕೇಂದ್ರ, ಮೋಟಾರು ವಾಹನ ನಿಯಮದಲ್ಲಿ ತಿಳಿಸಿರುವಂತೆ ಭದ್ರತಾ ಲಕ್ಷಣಗಳನ್ನು ಹೊಂದಿರುವ ನೋಂದಣಿ ಫಲಕವೇ ಹೈ ಸೆಕ್ಯೂರಿಟಿ ನೋಂದಣಿ ಪ್ಲೇಟ್.

ಜನಸಾಮಾನ್ಯರ ಸುರಕ್ಷತೆ ಹಾಗೂ ಭದ್ರತೆಯನ್ನು ಕಾಪಾಡುವ ದೃಷ್ಟಿಯಿಂದ ನೋಂದಣಿ ಸಂಖ್ಯೆ ನೀಡಲಾಗುವುದು. ಈ ಸಂಬಂಧ ಈಗಾಗಲೇ ನಗರದ ಕೆಲವೊಂದು ವಾಹನಗಳು ಈ ಫಲಕಗಳನ್ನು ಹೊಂದಿವೆ. ಫಲಕಗಳಲ್ಲಿ ವಾಹನದ ವಿವರ ಹಾಗೂ ಮಾಲೀಕರ ವಿವರ ತುಂಬಲಾಗಿರುತ್ತದೆ. ಈ ವಿವರ ರಾತ್ರಿ ವೇಳೆಯೂ ಕಾಣಿಸುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೈತರ ಮೇಲಿನ ಮೊಕದ್ದಮೆ ವಾಪಸ್: ಸಿಎಂ
ವಿದ್ಯುತ್ ಕೊರತೆ ಮುಕ್ತ ರಾಜ್ಯಕ್ಕಾಗಿ ಪಣ: ಈಶ್ವರಪ್ಪ
ನ್ಯಾಯಾಂಗ ನಿಂದನೆ: ಸುಪ್ರೀಂ ತಡೆಯಾಜ್ಞೆ ಮುಂದೂಡಿಕೆ
ತಮಿಳರು ಕರ್ನಾಟಕದ ಪೂರ್ವಿಕರಂತೆ!: ತಮಿಳು ಕಳಗಂ
ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಬದ್ಧ: ಆಚಾರ್ಯ
ಉಪಚುನಾವಣೆ; ಖರ್ಗೆ, ಕೃಷ್ಣಪ್ಪ ಪುತ್ರರಿಗೆ ಟಿಕೆಟ್