ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಂಪೂರ್ಣ ಪಾನ ನಿಷೇಧ ಪ್ರಸ್ತಾವನೆ: ಸಚಿವ ಸುರೇಶ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಪೂರ್ಣ ಪಾನ ನಿಷೇಧ ಪ್ರಸ್ತಾವನೆ: ಸಚಿವ ಸುರೇಶ್
ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಮಾಡುವ ಇಂಗಿತ ವ್ಯಕ್ತಪಡಿಸಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್, ಶೀಘ್ರದಲ್ಲೇ ಇದನ್ನು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದಿದ್ದಾರೆ.

ಮದ್ಯಪಾನದ ವಿರುದ್ಧ ಜನಪರ ಹೋರಾಟ ನಡೆಸಿದ್ದ ಎ.ಟಿ. ಬಾಬುರವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಈ ಹೇಳಿಕೆ ನೀಡಿದ್ದಾರೆ.

ಮದ್ಯಪಾನ ಒಂದು ವರ್ಗದ ಜನರಲ್ಲಿ ಮಾತ್ರವಿದ್ದರೂ ಅದರ ವ್ಯಾಪ್ತಿ ದೊಡ್ಡದಾಗಿದೆ. ಹಾಗೊಂದು ವೇಳೆ ಸರಕಾರವು ಮದ್ಯಪಾನವನ್ನು ನಿಷೇಧಗೊಳಿಸಿದಲ್ಲಿ ಕೆಲವರಿಗೆ ಮಾತ್ರ ಅನ್ಯಾಯವಾಗಬಹುದು. ಆದರೆ ರಾಜ್ಯದ ಎಲ್ಲಾ ಮಹಿಳೆಯರು ಸಂತಸಪಡಲಿದ್ದಾರೆ ಎಂದು ಸುರೇಶ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು.

ಕೇವಲ ಸಾರಾಯಿ ಮಾರಾಟವನ್ನು ನಿಲ್ಲಿಸಿ ಜನತೆಗೆ ದುಬಾರಿ ಬಿಯರ್ ಕುಡಿಸುವ ಯೋಚನೆಯೂ ಸರಕಾರದ್ದಲ್ಲ ಎಂಬುದನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ. ಸಂಪುಟದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧದ ಬಗ್ಗೆ ಸದ್ಯದಲ್ಲೇ ಪ್ರಸ್ತಾವನೆ ಸಲ್ಲಿಸುತ್ತೇನೆ, ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಈಗಲೇ ಹೇಳುವುದು ಅಸಾಧ್ಯ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಪಾನ ಪ್ರಿಯರಿಗಾಗಿ ಲಾಲ್‌ಬಾಗಿನಲ್ಲಿ ನಡೆದ ವೈನ್ ಮೇಳಕ್ಕೆ ಸಂಪೂರ್ಣ ಬೆಂಬಲ ನೀಡಿದ್ದ ಸರಕಾರದ ಬಾಯಿಯಲ್ಲೀಗ ಸಂಪೂರ್ಣ ಪಾನ ನಿಷೇಧದ ಮಾತುಗಳು ಬರುತ್ತಿರುವುದು ತೀರಾ ಹಾಸ್ಯಾಸ್ಪದವಾಗಿದೆ. ಅಲ್ಲದೆ ಮಾಲ್‌ಗಳಲ್ಲೂ ಬಿಯರ್ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆ ಯೋಚಿಸಲಾಗುತ್ತದೆ ಎಂದು ಕಳೆದ ತಿಂಗಳಷ್ಟೇ ಸರಕಾರ ಹೇಳಿಕೆ ನೀಡಿದ್ದನ್ನು ಕೂಡ ಈಗ ನೆನಪಿಸಿಕೊಳ್ಳಬಹುದು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂದು ರಾಜ್ಯದೆಲ್ಲೆಡೆ ಸಂಭ್ರಮದ ನಾಗರಪಂಚಮಿ
ಬಿಜೆಪಿ ಕಚೇರಿ ಧ್ವಂಸದ ಹಿಂದೆ ಕಾಂಗ್ರೆಸ್ ಕೈವಾಡ
ಕೆಎಂಎಫ್: 3ತಿಂಗಳ ನಂತ್ರ ಡಿ.ವಿ.ಗೆ ಅಧ್ಯಕ್ಷ ಪಟ್ಟ
ಪಿಯುಸಿ ಸಪ್ಲಿಮೆಂಟರಿ ಫಲಿತಾಂಶ ಪ್ರಕಟ
ರಾಜ್ಯದ ಮುಂದಿನ ಸಿಎಂ ಸಿದ್ದರಾಮಯ್ಯ: ವರ್ತೂರ್
ಜೆಡಿಎಸ್ ಆಳ್ವಿಕೆ ಅಂತ್ಯ; ಕೆಎಂಎಫ್ ಅಧ್ಯಕ್ಷರಾಗಿ ರೆಡ್ಡಿ