ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಸಚಿವರಿದ್ದ ಕಾರ್ಯಕ್ರಮಕ್ಕೆ ನಾ ಬರೋಲ್ಲಾ: ಅನಂತಮೂರ್ತಿ (U.R. ananthmurthy | medium policy | mining scam | Yeddyurappa)
ಬಿಜೆಪಿ ಸಚಿವರಿದ್ದ ಕಾರ್ಯಕ್ರಮಕ್ಕೆ ನಾ ಬರೋಲ್ಲಾ: ಅನಂತಮೂರ್ತಿ
ಬೆಂಗಳೂರು, ಸೋಮವಾರ, 27 ಜುಲೈ 2009( 20:36 IST )
PTI
ಗಣಿಧಣಿಗಳ ಕಪಿಮುಷ್ಠಿಯಲ್ಲಿ ನಡೆಯುತ್ತಿರುವ ಸರ್ಕಾರದ ಯಾವುದೇ ಸಚಿವರು ಭಾಗವಹಿಸುವ ಸಮಾರಂಭಗಳಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ತಿಳಿಸಿದ್ದಾರೆ.
ಆದರೆ ಭಾಷಾ ನೀತಿಗೆ ಸಂಬಂಧಿಸಿದಂತೆ ತಲೆದೋರಿರುವ ವಿವಾದದ ಕುರಿತಂತೆ ಸರ್ಕಾರದ ನಿಲುವಿಗೆ ತಮ್ಮ ಪೂರ್ಣ ಬೆಂಬಲ ಇದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಭಿವೃದ್ದಿ ಮಂತ್ರದ ಬಗ್ಗೆ ಹೇಳುತ್ತಿರುವುದು ದೊಡ್ಡ ತಮಾಷೆಯಾಗಿದೆ. ಅಭಿವೃದ್ದಿ ಹೆಸರಿನಲ್ಲಿ ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಬುಡಕಟ್ಟು ಜನರ ಸಂಸ್ಕೃತಿ ನಾಶವಾಗುತ್ತಿದೆ ಎಂದು ಅನಂತಮೂರ್ತಿ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಕೃತಿ ಬಿಡುಗಡೆ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಸ್ತೆ ಅಗಲೀಕರಣ, ಮೇಲ್ಸೇತುವೆ ನಿರ್ಮಾಣ, ಕಾರ್ಖಾನೆ ಸ್ಥಾಪನೆ ಹೀಗೆ ಪ್ರತಿಯೊಂದು ಅಭಿವೃದ್ದಿಯಲ್ಲೂ ತೊಂದರೆಗೆ ಒಳಗಾಗುತ್ತಿರುವುದು ರೈತರು ಮತ್ತು ಬುಡಕಟ್ಟು ಜನರು. ರಾಜಕೀಯ ಪಕ್ಷಗಳ ಅಭಿವೃದ್ದಿ ಹೆಸರಿನಲ್ಲಿ ಸಹಸ್ರಾರು ಮಂದಿ ಬೀದಿ ಪಾಲಾಗುತ್ತಿದ್ದಾರೆಂದು ಅನಂತಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.